ಉತ್ತರ ಕನ್ನಡ ಜಿಲ್ಲಾದ್ಯಂತ ಜು. 19ರ ವರೆಗೆ ಭಾರೀ ಮಳೆ: ತುರ್ತು ಸೇವೆಗೆ ಇಲ್ಲಿ ಸಂಪರ್ಕಿಸಿ

ಪ್ರಗತಿವಾಹಿನಿ ಸುದ್ದಿ, ಕಾರವಾರ  : ಜಿಲ್ಲಾದ್ಯಂತ ಜು. ೧೯ ರವರೆಗೆ ಭಾರೀ ಮಳೆ ಬೀಳುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಳೆ -ಗಾಳಿ ಬೀಸುವ ಸಂದರ್ಭದಲ್ಲಿ ಮಕ್ಕಳು, ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ, ಕಟ್ಟಡ, ಮರಗಳ ಹತ್ತಿರ ಹಾಗೂ ಕೆಳಗೆ ನಿಲ್ಲದೇ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು.

Home add -Advt

ಪ್ರಕೃತಿ ವಿಕೋಪ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ತುರ್ತು ಸೇವೆ ಟೋಲ್ ಫ್ರೀ ಸಂಖ್ಯೆ ೧೦೭೭, ಲ್ಯಾಂಡ್ ಲೈನ್ ಸಂಖ್ಯೆ ೦೮೩೮೨-೨೨೯೮೫೭ ಮತ್ತು ವಾಟ್ಸಾಪ್ ಸಂಖ್ಯೆ ೯೪೮೩೫೧೧೦೧೫ ಗೆ ಸಂಪರ್ಕಿಸಬೇಕು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಿನಿಮೀಯ ಮಾದರಿ ಕೊಲೆ ರಹಸ್ಯ ಬಯಲು: ಮಹಿಳೆ ಸಹಿತ ನಾಲ್ವರ ಬಂಧನ

 

Related Articles

Back to top button