Kannada NewsKarnataka News
ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ಕ್ರಿಕೆಟ್ ಪಂದ್ಯಾವಳಿ ಚೈತನ್ಯ ತುಂಬಲಿ – ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲಗಾ ಗ್ರಾಮದ ಬಾಲಾಜಿ ಸ್ಪೋರ್ಟ್ಸ್ ಆಶ್ರಯದಲ್ಲಿ ಆಯೋಜಿಲಾಗಿರುವ ಹಾಪ್ ಪಿಚ್ ನೈಟ್ ಭವ್ಯ ಕ್ರಿಕೆಟ್ ಸ್ಪರ್ಧೆಯನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗುರುವಾರ ಉದ್ಘಾಟಿಸಿದರು.

ಈ ಕ್ರಿಕೆಟ್ ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳನ್ನು ಆಯೋಜಿಸಲಾಗಿದ್ದು, ಪ್ರಥಮ ಬಹುಮಾನವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೆಸರಿನಲ್ಲಿ ಹಾಗೂ ದ್ವಿತೀಯ ಬಹುಮಾನ ಚನ್ನರಾಜ ಹಟ್ಟಿಹೊಳಿ ಹೆಸರಿನಲ್ಲಿ ಪ್ರಾಯೋಜಿಸಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಬಾಲಚಾರ್ಯ ಸಿದ್ದಸೇನ ಮಹಾರಾಜರು, ಗಣಪತ ಅರ್ಜುನ ಮಾರಿಹಾಳ್ಕರ್, ದಾಕುಲ್ ಬಿಲ್ಗೊಜಿ, ಯಲ್ಲಪ್ಪ ಸಾಮಜಿ, ತುಷಾರ್ ತಹಶಿಲ್ದಾರ, ರೂಪಾ ಸುತಾರ, ವಿಜಯಕುಮಾರ, ಚಾರುಕೀರ್ತಿ, ಮಹಾವೀರ ಪಾಟೀಲ, ರಾಜೀವ ದೊಡ್ಡಣ್ಣವರ, ಸಾಗರ ಕಾಮನಾಚೆ, ಸದಾನಂದ ಬಿಲ್ಗೊಜಿ, ವಿಲಾಸ ಪರಿಟ್, ನಾಜಿರಸಾಬ್ ಮುಲ್ಲಾ, ಕಿರಣ ಹಣಮಂತಾಚೆ, ಪಿರಾಜಿ ಜಾಧವ್, ಕೃಷ್ಣ ಸಂತಾಜಿ, ಚಂದ್ರಕಾಂತ ಕಾನೋಜಿ, ಪ್ರಕಾಶ ಲೋಹಾರ, ಚೇತನ ಕುರಂಗಿ, ತವನಪ್ಪ ಪಾಯಕ್ಕ, ಜಿನ್ನಪ್ಪ ಸಾಮಜಿ, ಲಕ್ಷ್ಮೀ ಸಂತಾಜಿ, ರೇಖಾ ಚಿಕ್ಕಪರಪ್ಪ, ಸುಜಾತಾ ದೇಸಾಯಿ, ಭಾರತಿ ಪಾಯಕ್ಕ, ರೇಖಾ ಪರಿಟ, ಲಕ್ಷ್ಮೀ ಗಜಪತಿ, ಸರೋಜಾ ವಡಗಾವಿ, ಕಲ್ಪನಾ ಹಣಮಂತಾಚೆ, ಬಾಲಾಜಿ ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು, ಕ್ರೀಡಾ ತಂಡಗಳು ಶಿವನೇರಿ ಯುವಕ ಮಂಡಳದವರು ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ