Latest

ಕೋವಿಡ್ ಡೆತ್ ಆಡಿಟ್; ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಕರೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ ಸಾವನ್ನಪ್ಪಿದರವ ಸಂಖ್ಯೆ ಬಗ್ಗೆ ಸರಿಯಾಗಿ ಮಾಹಿತಿ ನೀಡದೇ ಸಾವಿನ ಸಂಖ್ಯೆಯನ್ನು ಮುಚ್ಚಿಡುತ್ತಿದೆ. ಹಾಗಾಗಿ ಕಾಂಗ್ರೆಸ್ ನಿಂದಲೇ ಕೋವಿಡ್ ಡೆತ್ ಆಡಿಟ್ ನಡೆಸಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ಕಾಂಗ್ರೆಸ್ ಕಾರ್ಯಕರ್ತರು ಕೊರೊನಾ ಡೆತ್ ಆಡಿಟ್ ನಡೆಸಿ, ಮೃತ ಕುಟುಂಬದ ನೋಂದಣಿ ಆರಂಭಿಸಿ. ಸಾವಿನ ಪ್ರಮಾಣಪತ್ರ ಸೇರಿ ಎಲ್ಲಾ ಮಾಹಿತಿಗಳನ್ನು ಕಲೆ ಹಾಕಿ. ಕೋವಿಡ್ ಗೆ ಬಲಿಯಾದ ಕುಟುಂಬಕ್ಕೆ ಕಾಂಗ್ರೆಸ್ ನಿಂದಲೇ ಪರಿಹಾರ ನೀಡಲಾಗುವುದು. ಈ ಬಗ್ಗೆ ಸಿಎಲ್ ಪಿ ನಾಯಕರೊಂದಿಗೆ ಚರ್ಚಿಸಿ ನಿರ್ಧರಿಸಲಾಗಿವುದು ಎಂದು ತಿಳಿಸಿದರು.

ಇದೇ ವೇಳೆ 17 ವರ್ಷದೊಳಗಿನ ಮಕ್ಕಳಲ್ಲಿ ಬಹಳ ಕ್ರಿಯೆಟಿವಿಟಿ ಇರುತ್ತೆ. ನಾನು ಕೂಡ ಈ ಬಗ್ಗೆ ಶಾಲೆಗಳಲ್ಲಿ ಗಮನಿಸಿದ್ದೇನೆ. ವಿದ್ಯಾರ್ಥಿಗಳು ವ್ಯಾಕ್ಸಿನೇಟ್ ಕರ್ನಾಟಕ ಎಂಬ ವಿಡಿಯೋ ಮಾಡುವಂತೆ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ಗುರುಪ್ರಸಾದ್ ಮೋಹಪಾತ್ರ ಕೊರೊನಾಗೆ ಬಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button