Latest

ರೇಪ್ ಸಂತ್ರಸ್ತೆ ಮೇಲೆ ಪೊಲೀಸ್ ಪೇದೆ ಅತ್ಯಾಚಾರ; ಗರ್ಭವತಿಯಾಗುತ್ತಿದ್ದಂತೆ ಪರಾರಿ

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಅತ್ಯಾಚಾರ ಸಂತ್ರಸ್ತ ಬಾಲಕಿ ಮೇಲೆ ಪೊಲೀಸ್ ಕಾನ್ಸ್ ಟೇಬಲ್ ಓರ್ವ ಅತ್ಯಾಚಾರವೆಸಗಿದ್ದು, ಗರ್ಭವತಿಯನ್ನಾಗಿ ಮಾಡಿರುವ ಆರೋಪ ಕೇಳಿಬಂದಿದೆ. ಇದೀಗ ಸಂತ್ರಸ್ತೆ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಅತ್ಯಾಚಾರಕ್ಕೊಳಗಾಗಿದ್ದ ಮಗಳ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯ ಪೇದೆ ಶಿವರಾಜ್ ಅತ್ಯಾಚಾರವೆಸಗಿದ್ದು, ಮಗಳು ಗರ್ಭವತಿಯಾಗಿದ್ದು, ಗರ್ಭಪಾತಮಾಡಿಸಿಕೊಳ್ಳುವಂತೆ ಬೆದರಿಕೆಯೊಡ್ಡುತ್ತಿರುವುದಾಗಿ ಕಡಬ ಠಾಣೆಯಲ್ಲಿ ಸಂತ್ರಸ್ತೆ ತಂದೆ ದೂರು ದಾಖಲಿಸಿದ್ದಾರೆ.

Home add -Advt

2 ವರ್ಷಗಳ ಹಿಂದೆ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಕಡಬ ಪೊಲೀಸ್ ಠಾಣೆಯಲ್ಲಿಯೇ ಈ ಕುರಿತು ಪ್ರಕರಣ ದಾಖಲಾಗಿತ್ತು. ಸಮನ್ಸ್ ನೀಡುವ ನೆಪದಲ್ಲಿ ಸಂತ್ರಸ್ತ ಬಾಲಕಿ ಮನೆಗೆ ಬರುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಶಿವರಾಜ್ ಸಂತ್ರಸ್ತೆ ಮೇಲೆಯೇ ಅತ್ಯಾಚಾರವೆಸಗಿದ್ದಾನೆ. ಮಗಳನ್ನು ಗರ್ಭವತಿಯನ್ನಾಗಿ ಮಾಡಿದ್ದು, ಹಣ ನೀಡುತ್ತೇನೆ ಅಬಾರ್ಷನ್ ಮಾಡಿಸಿಕೊಳ್ಳುವಂತೆ ಹೇಳಿದ್ದಾನೆ. ಇದಕ್ಕೆ ನಾನು ಒಪ್ಪಲಿಲ್ಲ ಅದಕ್ಕೆ ಬೆದರಿಕೆಯೊಡ್ದಿದ್ದಾನೆ. ಅಲ್ಲದೇ ಸೆ.18ರಿಂದ ಯುವತಿ ಹಾಗೂ ತನ್ನ ಪತ್ನಿ ನಾಪತ್ತೆಯಾಗಿದ್ದು, ಘಟನೆ ಬೆನ್ನಲ್ಲೇ ಇದೀಗ ಪೊಲೀಸ್ ಕಾನ್ಸ್ ಟೇಬಲ್ ಶಿವರಾಜ್ ಕೂಡ ತಲೆಮರೆಸಿಕೊಂಡಿದ್ದಾನೆ ಎಂದು ಸಂತ್ರಸ್ತೆ ತಂದೆ ದೂರು ದಾಖಲಿಸಿದ್ದಾರೆ.
ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ ನಡೆಸಿದ ಪ್ರೇಮಿಗಳು

Related Articles

Back to top button