Vikalachetanara Day
Cancer Hospital 2
Bottom Add. 3

*ಬಿಜೆಪಿ-ಜೆಡಿಎಸ್ ನಾಯಕರಿಗೆ ಮಾಡಲು ಕೆಲಸವಿಲ್ಲ; ಯತೀಂದ್ರ ವಿರುದ್ಧ ಅನಗತ್ಯವಾಗಿ ಆರೋಪಿಸಿತ್ತಿದ್ದಾರೆ; ಡಿಸಿಎಂ ತಿರುಗೇಟು*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿಡಿಯೋ ವೈರಲ್ ವಿಚಾರವಾಗಿ ವಿಪಕ್ಷ ನಾಯಕರು ಮಾಡುತ್ತಿರುವ ವರ್ಗಾವಣೆ ದಂಧೆ ಬಿಸಿನೆಸ್ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಮಾಡಲು ಕೆಲಸವಿಲ್ಲ ಅದಕ್ಕೆ ಆರೋಪ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಯತೀಂದ್ರ ಸಿದ್ದರಾಮಯ್ಯ ಫೋನ್ ನಲ್ಲಿ ಸಿಎಸ್ ಆರ್ ಫಂಡ್ ಬಗ್ಗೆ ಶಾಲಾ ಕಟ್ಟಡ, ಪೀಠೋಪಕರಣ ಒದಗಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಡಿಯೋದಲ್ಲಿ ಎಲ್ಲಿ ಅವರು ಲಂಚದ ಬಗ್ಗೆ, ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ? ಎಂದು ಪ್ರಶ್ನಿಸಿದರು.

ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಮಾಡಲು ಬೇರೆ ಕೆಲಸವಿಲ್ಲ ಹಾಗಾಗಿ ಅನಗತ್ಯ ಆರೋಪಗಳನ್ನು ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಯತೀಂದ್ರ ಮಾಜಿ ಶಾಸಕರು ಅದರಲ್ಲಿಯೂ ಕೆಡಿಪಿ ಸದಸ್ಯ, ಆಶ್ರಯ ಸಮಿತಿ ಅಧ್ಯಕ್ಷರಾಗಿ ತಮ್ಮ ವ್ಯಾಪ್ತಿಯಲ್ಲಿನ ಶಾಲೆಗಳಿಗೆ ಬೇಂಚ್ ಪೀಠೋಪಕರಣ ಹಾಕುವ ಬಗ್ಗೆ ಅಧಿಕರಿಯೊಂದಿಗೆ ಹಾಗೂ ಮಹದೇವ್ ಎನ್ನುವವರೊಂದಿಗೆ ಮಾತನಾಡಿ ಸೂಚಿಸಿದ್ದಾರೆ. ಇದನ್ನು ವಿಪಕ್ಷ ನಾಯಕರು ಅನಗತ್ಯವಾಗಿ ಆರೋಪಿಸುವುದು ಸರಿಯಲ್ಲ. ಅವರು ಆರೋಪ ಮಾಡುತ್ತಾ ಇರಲಿ ಎಂದು ಗರಂ ಆದರು.

Bottom Add3
Bottom Ad 2

You cannot copy content of this page