
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರಕುಶಲ ನಿಗಮದ ಎಂ.ಡಿ.ಡಿ.ರೂಪಾ ಹಾಗೂ ನಿಗಮದ ಅಧ್ಯಕ್ಷ ಬೇಳುರು ರಾಘವೇಂದ್ರ ಶೆಟ್ಟಿ ವಿರುದ್ಧದ ಸಮರ ಮುಂದುವರೆದಿದ್ದು, ಕಲಾಕೃತಿಗಳನ್ನು ಅನಾಮತ್ತಾಗಿ, ಹಣ ಪಾವತಿ ಮಾಡದೇ ಎತ್ತಿಕೊಂಡು ಹೋಗಿರುವುದರ ಹಣ ಪಾವತಿ ಮಾಡುವಂತೆ ಡಿ.ರೂಪಾ ರಾಘವೇಂದ್ರ ಶಟ್ಟಿ ಅವರಿಗೆ ನೋಟೀಸ್ ನೀಡಿದ್ದಾರೆ.
ತಾವು ನಿಗಮಕ್ಕೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ತಾವು ನಿಗಮದಿಂದ ಈ ಕೆಳಕಂಡ ಕರಕುಶಲ ವಸ್ತುಗಳನ್ನು ಅನಾಮತ್ತಾಗಿ ಮಳಿಗೆಗಳಿಂದ ಎತ್ತಿಕೊಂಡು ಹೋಗಿದ್ದು, ಈಗಾಗಲೇ ಮೌಖಿಕವಾಗಿ ಹಲವು ಬಾರಿ ಅದರ ಬಾಬು ಮೊತ್ತವನ್ನು ಪಾವತಿಸಲು ಕೋರಲಾಗಿದ್ದು ತಾವು ಇದುವರೆಗೂ ಪಾವತಿಸಿರುವುದಿಲ್ಲ ಹಾಗೂ ತಾವು ಕೂಡಲೇ ಈ ಕೆಳಕಂಡ ಕರಕುಶಲ ವಸ್ತುಗಳ ಮೊತ್ತವನ್ನು ನಿಗಮಕ್ಕೆ ಪಾವತಿಸಬೇಕು ಎಂದು ಸೂಚಿಸಿದ್ದಾರೆ.
ದಿನಾಂಕ ಹಾಗೂ ಕರಕುಶಲ ವಸ್ತು, ಅದರ ಬೆಲೆ ಸಮೇತ ವಿವರಿಸಿರುವ ಡಿ.ರೂಪಾ, ಶ್ರೀಗಂಧದ ಮಣಿ, ಪುಷ್ಪ ಹಾರ, ಶ್ರೀಗಂಧದ ಕೃಷ್ಣ ವಿಗ್ರಹ, ಶ್ರೀಗಂಧದ ರಾಮ ವಿಗ್ರಹ, ಶಿವಾನಿ ವುಡ್ ರಾಮ ವಿಗ್ರಹ, ಶಾಲುಗಳು ಹೀಗೆ ಹಲವು ವಸ್ತುಗಳನ್ನು ಹಣ ಪಾವತಿಸದೇ ತೆಗೆದುಕೊಂಡು ಹೋಗಿದ್ದು, ತಕ್ಷಣ ಹಣ ಪಾವತಿ ಮಾಡಬೇಕು.
ಅಲ್ಲದೇ ನೀವು ನೇರವಾಗಿ ನಿಗಮದ ಕರಕುಶಲ ಕರ್ಮಿಗಳು ಹಾಗೂ ನೋಂದಾಯಿತ ಮಾರಾಟಗಾರರಿಂದ ಅನೇಕ ಕಲಾಕೃತಿಗಳನ್ನು ಹಣ ಪಾವತಿಸದೆ ನಿಗಮದ ಪಡೆದುಕೊಂಡಿದ್ದು, ಈ ವಿಷಯ ನಿಗಮಕ್ಕೆ ನೇರ ಸಂಬಂಧ ಇಲ್ಲದಿದ್ದರೂ, ನಿಗಮದ ಅಧ್ಯಕ್ಷರ ಹುದ್ದೆಗೆ ಹಾಗೂ ನಿಗಮದ ಹೆಸರಿಗೆ ಕಳಂಕ ತರುವಂತಾಗಿದೆ. ಆದ್ದರಿಂದ ಮೇಲೆ ಹೇಳಿದ ಎಲ್ಲಾ ವಸ್ತುಗಳ ಹಣ ಪಾವತಿ ಕೂಡಲೇ ಮಾಡಬೇಕೆಂದು ತಾಕೀತು ಮಾಡಿದ್ದಾರೆ.
ಇಲ್ಲಿದೆ ನೋಟೀಸ್ ಪ್ರತಿ – DocScanner 2 Jun 2022 12-47 pm
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ