Latest

*ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ?; ರೋಹಿಣಿ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ ಡಿ.ರೂಪಾ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಐಎ ಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿ, ಖಾಸಗಿ ಫೋಟೊ ವೈರಲ್ ಮಾಡಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದ ರೋಹಿಣಿ ಸಿಂಧೂರಿ, ಗೆಟ್ ವೆಲ್ ಸೂನ್ ಎಂದು ಕೌಂಟರ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ಡಿ.ರೂಪಾ, ರೋಹಿಣಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಫೋಸ್ಟ್ ಮಾಡಿರುವ ಡಿ.ರೂಪಾ, ಗೆಟ್ ವೆಲ್ ಸೂನ್ ಎಂದು ನನಗೆ ಹೇಳಿದ್ದಾರಲ್ಲಾ, ಅವರ ಡಿಲಿಟೆಡ್ ನಗ್ನ ಚಿತ್ರಗಳ ಬಗ್ಗೆ ಮಾತಾಡ್ತಾರಾ? ಎಂದು ಪ್ರಶ್ನಿಸಿದ್ದಾರೆ. ನಂಬರ್ ಅವರದೇ ಅಲ್ಲವಾ? ಐಎ ಎಸ್ ಅಧಿಕಾರಿ ನಗ್ನ ಚಿತ್ರ, Nude, naked pics ಕಳುಹಿಸಬಹುದಾ? ಈ ರೀತಿಯ ಪಿಕ್ಸ್ ಕಳುಹಿಸಿದ್ದು ಯಾವ ಕಾರಣಕ್ಕಾಗಿ? ಯಾವ ಸಂಧಾನಕ್ಕೆ? ಅವರ ಮೇಲಿರುವ ಆರೋಪಗಳು ಸಾಬೀತಾಗಿದ್ದರೂ ಪ್ರಾಥಮಿಕ ತನಿಖೆ ವಿಷಯದಲ್ಲಿ ಮುಂದೆ ಶಿಕ್ಷೆ ಆಗದಂತೆ ತಡೆಯಲಾ? ಯಾವುದಕ್ಕೆ ಎಂಬುದನ್ನು ಅವರೇ ಉತ್ತರಿಸಲಿ ಎಂದು ಹೇಳಿದ್ದಾರೆ.

ಅಲ್ಲದೇ ಒಂದೇ ಸಮಯದಲ್ಲಿ ಡಿಲಿಟ್ ಮಾಡಿರುವ ಸಾಲು ಸಾಲು ಮೆಸೆಜ್ ಗಳ ಸ್ಕ್ರೀನ್ ಶಾಟ್ ನ್ನು ಕೂಡ ಡಿ.ರೂಪಾ ಪೋಸ್ಟ್ ಮಾಡಿದ್ದಾರೆ. ಇನ್ನೂ ಮೆಸೆಜ್ ಗೆ ಸೋ ಮ್ಯಾಡ್ಲಿ ಮ್ಯಾಡ್ಲಿ ಬ್ಯೂಟಿಫುಲ್ ಎಂದು ಆ ಕಡೆಯಿಂದ ರೀಪ್ಲೆ ನೀಡಿರುವ ಬಗ್ಗೆಯೂ ಶೇರ್ ಮಾಡಿದ್ದಾರೆ. ಒಟ್ಟಾರೆ ಇಬ್ಬರು ಮಹಿಳಾ ಅಧಿಕಾರಿಗಳ ನಡುವಿನ ಕಿತ್ತಾಟ ಬೀದಿ ರಂಪವಾಗಿದ್ದು, ರಾಜ್ಯ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದೆ.

*Get Well Soon: ಡಿ.ರೂಪಾ ಆರೋಪಕ್ಕೆ ಖಡಕ್ ಉತ್ತರ ನೀಡಿದ ರೋಹಿಣಿ ಸಿಂಧೂರಿ*

Home add -Advt

https://pragati.taskdun.com/rohini-sindhurireactiond-roopaget-well-soon/

Related Articles

Back to top button