Latest

ಯತ್ನಾಳ್ ಓರ್ವ ಆರ್ಡಿನರಿ ಶಾಸಕ; ಇಂಥ ವಿಷಯ ಮಾತನಾಡಲು ಅವರು ಯಾರು?: ಡಿವಿಎಸ್ ಕಿಡಿ

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 16ರಂದು ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ ಸಂಪುಟ ವಿಸ್ತರಣೆಯಾಗುತ್ತೋ, ಇನ್ನೇನು ಆಗುತ್ತೋ ಎಂಬುದು ಗೊತ್ತಿಲ್ಲ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಆಕ್ರೋಶ ವ್ಯಕ್ತಪಡಿಸಿದ್ದು, ಯತ್ನಾಳ್ ಓರ್ವ ಆರ್ಡಿನರಿ ಶಾಸಕ ಎಂದು ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ, ಯತ್ನಾಳ್ ಪಕ್ಷದ ಅಧ್ಯಕ್ಷರಲ್ಲ, ಅವರೊಬ್ಬ ಆರ್ಡಿನರಿ ಶಾಸಕ. ಬೀದಿಯಲ್ಲಿ ನಿಂತು ಮಾತನಾಡುವುದು ಅವರಿಗೆ ಶೋಭೆ ತರಲ್ಲ. ಪಕ್ಷದ ಚೌಕಟ್ಟಿನಲ್ಲಿ ಮಾತನಾಡುವುದು ಒಳಿತು. ಇಂಥಹ ವಿಷಯ ಮಾತನಾಡಲು ಅವರು ಯಾರು ಎಂದು ಪ್ರಶ್ನಿಸಿದ್ದಾರೆ.

ಅಮಿತ್ ಶಾ ವಿಜಯಪುರಕ್ಕೆ ಬರುತ್ತಿದ್ದಾರೆ ಸಂಕ್ರಮಣದಲಲ್ಲಿ ಸಂಪುಟ ವಿಸ್ತರಣೆಯಾಗುತ್ತೋ ಅಥವಾ ಮತ್ತಿನ್ನೇನು ಬದಲಾವಣೆಯಾಗುತ್ತೋ ಗೊತ್ತಿಲ್ಲ. ಉತ್ತರ ಕರ್ನಾಟಕ, ವಿಜಯಪುರಕೆ ಒಳಿತಾಗುತ್ತೆ ಎಂದು ಯತ್ನಾಳ್ ಹೇಳಿಕೆ ನೀಡಿದ್ದರು.

Home add -Advt

Related Articles

Back to top button