Latest

ನಟ ದರ್ಶನ್ ಹೇಳಿಕೆ ಮನಸ್ಸಿಗೆ ನೋವು ತಂದಿದೆ; ಚಾಲೇಂಜಿಂಗ್ ಸ್ಟಾರ್ ವಿರುದ್ಧ ಜೋಗಿ ಪ್ರೇಮ್ ಅಸಮಾಧಾನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಟ ದರ್ಶನ್ ನನ್ನ ಆತ್ಮೀಯ ಸ್ನೇಹಿತ ಆದರೆ ನನ್ನ ಬಗ್ಗೆ ಆತ ಬಳಸಿದ ಕೆಲ ಪದ ಪ್ರಯೋಗದಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ನಟ, ನಿರ್ದೇಸಕ ಜೋಗಿ ಪ್ರೇಮ್ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೇಮ್, ನಿನ್ನೆ ದರ್ಶನ್ ಅವರು ‘ಜೋಗಿ ಪ್ರೇಮ್ ಪುಡಾಂಗ್’ ಎಂದು ಹೇಳಿಕೆ ನೀಡಿದ್ದರು. ಈ ಒಂದು ಪದ ಬಳಕೆಗೆ ಮಾತ್ರ ನಾನು ಪ್ರತಿಕ್ರಿಯಿಸುತ್ತಿದ್ದೇನೆ ಹೊರತು ದರ್ಶನ್ ಅವರ ಬೇರೆ ಯಾವುದೆ ಘಟನೆಗಳ ಬಗ್ಗೆ ನಾನು ಮಾತನಾಡುತ್ತಿಲ್ಲ. ನನಗೂ ಅವರ ಬೇರೆ ಯವಾ ವಿಚಾರಗಳಿಗೂ ಸಂಬಂಧವಿಲ್ಲ ಎಂದು ಹೇಳಿದರು.

Home add -Advt

ನನಗೆ ಹಾಗೂ ನನ್ನ ಪತ್ನಿ ರಕ್ಷಿತಾ ಇಬ್ಬರಿಗೂ ನಟ ದರ್ಶನ್ ಆತ್ಮೀಯ ಸ್ನೇಹಿತ. ಆದರೆ ಪ್ರೇಮ್ ಪುಡಾಂಗು ಎಂದು ಪದ ಬಳಕೆ ಮಾಡಿದ್ದು ನನಗೆ ಹಾಗೂ ರಕ್ಷಿತಾ ಇಬ್ಬರಿಗೂ ತುಂಬಾ ಬೇಸರ ತಂದಿದೆ. ದರ್ಶನ್ ಯಾಕೆ ಇಂತಹ ಹೇಳಿಕೆ ನೀಡಿದರು ಎಂಬುದೇ ನಮಗೆ ಗೊತ್ತಾಗುತ್ತಿಲ್ಲ. ಮನಸ್ಸಿಗೆ ತುಂಬಾ ನೋವಾಗಿದೆ. ಅವರು ಬಳಸಿದ ಪದಗಳಿಗೆ ಅವರದೇ ಅಭಿಮಾನಿಗಳು ಕರೆ  ಮಾಡಿ ಕ್ಷಮೆ ಕೇಳುತ್ತಿದ್ದಾರೆ. ‘ಕರಿಯ’ ಸಿನಿಮಾ ಸಂದರ್ಭದಿಂದಲೂ ದರ್ಶನ್ ನಮಗೆ ಫ್ಯಾಮಿಲಿ ಫ್ರೆಂಡ್. ನಿರ್ಮಾಪಕ ಉಮಾಪತಿ ಪರಿಚಯಿಸಿದ್ದೂ ನಾನೇ. ಬಳಿಕ ಅವರಿಬ್ಬರೂ ‘ರಾಬರ್ಟ್’ ನಂತ ಒಳ್ಳೆ ಚಿತ್ರ ಮಾಡಿದರು. ಸಿನಿಮಾ ವ್ಯವಹಾರಗಳೇ ಬೇರೆ ಸ್ನೇಹವೇ ಬೇರೆ. ಆದರೆ ದರ್ಶನ್ ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರಿ ಮಳೆಗೆ ಕುಸಿದ ಗೋಡೆ; 11ಕ್ಕೂ ಹೆಚ್ಚು ಜನರ ದುರ್ಮರಣ

Related Articles

Back to top button