Latest

ಇಂದ್ರಜಿತ್ ಲಂಕೇಶ್ ವಿರುದ್ಧ ಕಿಡಿಕಾರಿದ ದರ್ಶನ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಕಿಡಿಕಾರಿರುವ ಚಾಲೇಂಜಿಂಗ್ ಸ್ಟಾರ್ ದರ್ಶನ್, ಹಲ್ಲೆ ಪ್ರಕರಣವನ್ನು ಮೊದಲು ಸಾಬೀತು ಪಡಿಸಲಿ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಹೋಟೆಲ್ ನಲ್ಲಿ ಸಪ್ಲೈಯರ್ ಮೇಲೆ ಹಲ್ಲೆ ಆರೋಪಕ್ಕೆ ಪ್ರತಿಕ್ರಿಯಿಸಿ, ಊಟಕೊಡಲು ತಡವಾಗಿದ್ದಕ್ಕೆ ಪ್ರಶ್ನಿಸಿದ್ದೆ ಹೊರತು ಹಲ್ಲೆ ನಡೆಸಿಲ್ಲ. ಇಂದ್ರಜಿತ್ ಮಾಡುತ್ತಿರುವುದು ಆರೋಪ ಅಷ್ಟೇ. ಆರೋಪ ಸಾಬೀತುಪಡಿಸಲಿ ಎಂದರು.

Related Articles
Home add -Advt

ಮಾತೆತ್ತಿದರೆ ಸೆಲೆಬ್ರಿಟಿಗಳು ಎಂದು ಹೇಳುತ್ತಾರೆ. ಸೆಲೆಬ್ರಿಟಿ ಎನ್ನುವುದನ್ನು ಪಕ್ಕಕ್ಕಿಡಿ. ನಾನೊಬ್ಬ ಹ್ಯೂಮನ್ ಬಿಯಿಂಗ್. ನೀವು ರಫ್ ಆಗಿ ಮಾತಾಡಿದರೆ ನಾನೂ ರಫ್ ಆಗಿ ಮಾತಾಡುತ್ತೇನೆ. ಇನ್ನು ಸೆಲೆಬ್ರಿಟಿ ಎನ್ನುವುದನ್ನು ಇಟ್ಟುಕೊಂಡು ನಾನು ಮಾತನಾಡುವುದಾದರೆ ಈಗಲೂ ಮೇಕಪ್ ಹಾಕಿ ನಾಟಕ ಮಾಡಿಕೊಂಡು ಇರಬೇಕಾಗುತ್ತೆ. ಇಂದ್ರಜಿತ್ ಹೇಳಿಕೆಗಳು ಆರೋಪ ಮಾತ್ರ. ಹಲ್ಲೆ ಮಾಡಿದ್ದರೆ ಸಾಬೀತುಪಡಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು 25 ಕೋಟಿ ವಂಚನೆ ಯತ್ನ ಪ್ರಕರಣ ವಿಚಾರದಲ್ಲಿ ಅರುಣಾ ಕುಮಾರಿ ಜೂನ್ 16ರಂದು ಬಂದಿದ್ದರು. ಅಂದೇ ಅವರಿಗೆ ಹೇಳಿ ಕಳುಹಿಸಿದ್ದೆ. ಇದರಲ್ಲಿ ನಿಮ್ಮದೇನೂ ತಪ್ಪಿಲ್ಲ ಎಂದು. ಪ್ರಕರಣದ ಬಗ್ಗೆ ಎಫ್ ಐ ಆರ್ ದಾಖಲಾಗಿದೆ. ತನಿಖೆ ನಡೆಯುತ್ತಿದೆ. ತನಿಖೆಗೆ ಪೊಲೀಸರುಗೂ ಸ್ವಲ್ಪ ಸಮಯ ನೀಡಬೇಕು. ಹಾಗಾಗಿ ನಾವೂ ಕಾಯುತ್ತಿದ್ದೇವೆ ಹೊರತು ಪ್ರಕರಣ ಮುಚ್ಚಿ ಹಾಕುತ್ತಿಲ್ಲ. ಇಂದ್ರಜಿತ್ ದೊಡ್ದ ಇನ್ವೆಸ್ಟಿಗೇಟರ್. ಅವರಿಗೆ ದೊಡ್ಡ ದೊಡ್ಡ ಕಾಂಟ್ಯಾಕ್ಟ್ ಇದೆ ಹಾಗಾಗಿ ಅದೇನು ಇನೆಸ್ಟಿಗೇಟ್ ಮಾಡುತ್ತಾರೆ ಮಾಡಿಕೊಳ್ಳಲಿ. ನಾಳೆ ಈ ಪ್ರಕರಣದ ಬಗ್ಗೆ ಹೆಳಿಕೆ ಕೊಡಲು ಇನ್ನಷ್ಟು ಜನ ಸೇರಿಕೊಳ್ಳಬಹುದು. ಯಾರು ಯಾರು ಬರ್ತಾರೆ ಬರಲಿ. ಆದರೆ ಊಹಾಪೋಹಗಳನ್ನು ನಂಬುವ ಅಗತ್ಯವಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಚಾಲೇಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಇಂದ್ರಜಿತ್ ಹೊಸ ಬಾಂಬ್

ಏಕಕಾಲದಲ್ಲಿ 40 ಕಡೆಗಳಲ್ಲಿ 300 ಎಸಿಬಿ ಅಧಿಕಾರಿಗಳ ದಾಳಿ

Related Articles

Back to top button