Belagavi NewsBelgaum NewsKannada NewsKarnataka NewsNationalTravel
*ದತ್ತ ಮಂದಿರ ಜಲಾವೃತ: ನೀರಲ್ಲೆ ನಿಂತು ಪೂಜೆ ಸಲ್ಲಿಸಿದ ಭಕ್ತರು*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಗೆ ನದಿಗಳು ಉಕ್ಕಿ ಹರಿಯುತ್ತಿದೆ. ನದಿ ಭಾಗದ ದೇವಸ್ಥಾನಗಳು ಮುಳುಗಡೆ ಆಗಿವೆ.
ಭಾರೀ ಪ್ರಮಾಣದ ಮಳೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲೂಕಿನ ನರಸಿಂಹವಾಡಿ ಗ್ರಾಮದ ದತ್ತ ಮಂದಿರ ಜಲಾವೃತ ವಾಗಿದೆ.
ಮಹಾರಾಷ್ಟ್ರದ, ಕರ್ನಾಟಕ ರಾಜ್ಯದ ಆರಾಧ್ಯದೈವ ಆಗಿರುವ ಪಂಚಗಂಗಾ ಹಾಗೂ ಕೃಷ್ಣಾ ನದಿ ಸಂಗಮ ಸ್ಥಾನದಲ್ಲಿರುವ ದತ್ತ ಮಂದಿರ ಜಲಾವೃತವಾಗಿದೆ. ಎದೆವರೆಗೂ ನೀರಿದ್ರೂ ದೇವಸ್ಥಾನಕ್ಕೆ ಭಕ್ತರು ಪ್ರದಕ್ಷಿಣೆ ಹಾಕುತ್ತಿದ್ದಾರೆ.