Latest

ಯರಗಟ್ಟಿ: ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

ಪ್ರಗತಿವಾಹಿನಿ ಸುದ್ದಿ, ಯರಗಟ್ಟಿ

ಯರಗಟ್ಟಿಯಲ್ಲಿ ಶುಕ್ರವಾರ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಉದ್ಯಮಿ ಪಿ.ಆರ್.ರಡ್ಡಿಯವರ ಜನ್ಮ ದಿನದ ನಿಮಿತ್ತ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯರಗಟ್ಟಿಯ ಸಮುದಾಯ ಆರೋಗ್ಯ ಕೇಂದ್ರ ಮತ್ತು ಡಾಲ್ಫಿನ್ ಸ್ಟೋನ್ ಕ್ರಷರ್ ಮತ್ತು ಎಂ ಸ್ಯಾಂಡ್ ಯರಗಣವಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಶಿಬಿರದಲ್ಲಿ ನೂರೈವತ್ತಕ್ಕಿಂತ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ಸಂದರ್ಭದಲ್ಲಿ 60 ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. 

Home add -Advt

ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಎಸ್.ಬಳ್ಳೂರ್,  ತಾಲೂಕು ಆರೋಗ್ಯಧಿಕಾರಿ ಡಾ. ಮಹೇಶ ಚಿತ್ತರಗಿ, ಉದ್ಯಮಿ ಪಿ.ಆರ್.ರಡ್ಡಿ,  ಡಾ.ಮಹಾಂತೇಶ ಅರಬೆಂಚಿ, ರೈತ ಸಂಘದ ಮುಖಂಡ ಸೋಮು ರೈನಾಪುರ ಮೊದಲಾದವರು ಭಾಗವಹಿಸಿದ್ದರು. 

 

Related Articles

Back to top button