Kannada NewsKarnataka NewsLatest

ಬೆಳಗಾವಿಯಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರ ಸಾವು; ಮಾಹಿತಿ ಇದ್ದರೆ ತಿಳಿಸಿ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಬುಧವಾರ ಇಬ್ಬರು ಅಪರಿಚಿತ ವ್ಯಕ್ತಿಗಳು ಸವಿಗೀಡಾಗಿದ್ದಾರೆ. ಅವರ ಬಗ್ಗೆ ಮಾಹಿತಿ ಇದ್ದರೆ ರೈಲ್ವೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.

ಅಪರಿಚಿತ ವ್ಯಕ್ತಿ ಚಿಕ್ಕೋಡಿ ರೋಡ್ ರೈಲ್ವೆ ನಿಲ್ದಾಣದ ಹತ್ತಿರ ರೈಲು ಹಳಿಗಳ ರೈಲ್ವೆ ಕಿ.ಮಿ ನಂ.೬೮೪/೮೦೦-೯೦೦ ರಲ್ಲಿ ಚಲಿಸುವ ರೈಲು ಗಾಡಿಯ ಮುಂದೆ ಸಿಕ್ಕು ಆಕಸ್ಮಿಕವಾಗಿ ಮೃತ ಪಟ್ಟಿರುವ ಕಾರಣ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ (೫೫ ವರ್ಷ) ೫ ಫೂಟ್ ೪ ಇಂಚು ಎತ್ತರ ಹೊಂದಿದ್ದು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ನೀಟಾದ ಮೂಗು, ತಲೆ ಸಣ್ಣಗೆ ಕಪ್ಪು ಬಿಳಿ ಕೂದಲು ಹೊಂದಿರುತ್ತಾನೆ.
ಮೃತನು ಬಳಿ ಬಣ್ಣದ ಫುಲ್ ಶರ್ಟ್ , ಕಪ್ಪು ಪ್ಲಾಸ್ಟಿಕ್ ಬೂಟ್‌ನ್ನು ಧರಿಸಿರುತ್ತಾನೆ.
ಮೇಲಿನ ಚಹರೆಯುಳ್ಳ ಅಪರಿಚಿತ ವ್ಯಕ್ತಿ ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥವಾ ವಾರಸುದಾರರು ಯಾರಾದರು ಇದ್ದಲ್ಲಿ ಪೋಲಿಸ್ ಉಪ ನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ಬೆಳಗಾವಿ ದೂರವಾಣಿ ಸಂ. ೦೮೩೧-೨೪೦೫೨೭೩ ಅಥವಾ ಪಿ.ಎಸ್.ಐ ರವರ ಮೊಬೈಲ್ ನಂ.೯೪೮೦೮೦೨೧೨೭   ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಮತ್ತೊಂದು ಘಟನೆ

ಅಪರಿಚಿತ ವ್ಯಕ್ತಿ ಬೆಳಗಾವಿಯ ಸಮರ್ಥ ನಗರ ಹತ್ತಿರ ರೈಲು ಹಳಿಗಳ ರೈಲ್ವೆ ಕಿ.ಮಿ ನಂ.೬೮೪/೮೦೦-೯೦೦ ರಲ್ಲಿ ಚಲಿಸುವ ರೈಲು ಗಾಡಿಯ ಮುಂದೆ ಸಿಕ್ಕು ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವ ಕಾರಣ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ವ್ಯಕ್ತಿ (೬೦ ವರ್ಷ) ೫ ಫೂಟ್ ೫ ಇಂಚು ಎತ್ತರ ಹೊಂದಿದ್ದು, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ನೀಟಾದ ಮೂಗು, ಬೋಳು ತಲೆ ಹಿಂಬಾಗದಲ್ಲಿ ಸಣ್ಣಗೆ ಬಿಳಿ ಕೂದಲು ಹೊಂದಿರುತ್ತಾನೆ.
ಮೃತನು ಬಳಿ ಬಣ್ಣದ ಫುಲ್ ಶರ್ಟ್ , ಗ್ರೇ ಕಲರ್ ಪ್ಯಾಂಟ್‌ನ್ನು ಧರಿಸಿರುತ್ತಾನೆ.
ಮೇಲಿನ ಚಹರೆಯುಳ್ಳ ಅಪರಿಚಿತ ವ್ಯಕ್ತಿ ಕಾಣೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥವಾ ವಾರಸುದಾರರು ಯಾರಾದರು ಇದ್ದಲ್ಲಿ ಪೋಲಿಸ್ ಉಪ ನಿರೀಕ್ಷಕರು ರೈಲ್ವೆ ಪೊಲೀಸ್ ಠಾಣೆ ಬೆಳಗಾವಿ ದೂರವಾಣ ಸಂ. ೦೮೩೧-೨೪೦೫೨೭೩ ಅಥವಾ ಪಿ.ಎಸ್.ಐ ರವರ ಮೊಬೈಲ್ ನಂ.೯೪೮೦೮೦೨೧೨೭  ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button