Kannada NewsKarnataka NewsLatestTravel

*ಪ್ರಯಾಣಿಕರಿಗೆ ಗುಡ್ ನ್ಯೂಸ್: ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರ*

ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ರೈಲ್ವೆ ಮಂಡಳಿಯು ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ವಾಟ್ವಾ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ಅನುಮೋದನೆ ನೀಡಿದೆ.

ರೈಲು ಸಂಖ್ಯೆ 07333/07334 ಎಸ್ಎಸ್ಎಸ್ ಹುಬ್ಬಳ್ಳಿ–ವಾಟ್ವಾ-ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ ಪ್ರೆಸ್ ವಿಶೇಷ (1 ಟ್ರಿಪ್)

ರೈಲು ಸಂಖ್ಯೆ 07333 ಹುಬ್ಬಳ್ಳಿ–ವಾಟ್ವಾ  ವಿಶೇಷ ಎಕ್ಸ್ ಪ್ರೆಸ್ ರೈಲು 20.10.2025 (ಸೋಮವಾರ) ರಂದು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ರಾತ್ರಿ 10:15ಗಂಟೆಗೆ ಹೊರಟು, ಮರುದಿನ ರಾತ್ರಿ 9:50 ಗಂಟೆಗೆ ವಾಟ್ವಾ ತಲುಪಲಿದೆ. ಮರಳಿ ಇದೇ  ರೈಲು (ಸಂಖ್ಯೆ 07334) 22.10.2025 (ಬುಧವಾರ) ರಂದು ವಾಟ್ವಾದಿಂದ ಮಧ್ಯರಾತ್ರಿ 12:15 ಗಂಟೆಗೆ ಹೊರಟು, ಅದೇ ದಿನ ರಾತ್ರಿ 10:10 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಗೆ ಆಗಮಿಸಲಿದೆ.

ಮಾರ್ಗ ಮಧ್ಯದಲ್ಲಿ, ಈ ವಿಶೇಷ ರೈಲುಗಳು ಧಾರವಾಡ, ಅಳ್ನಾವರ, ಲೋಂಡಾ, ಬೆಳಗಾವಿ, ಗೋಕಾಕ ರೋಡ್, ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ಲೋನಾವಲಾ, ಕಲ್ಯಾಣ್, ವಸಾಯಿ ರೋಡ್, ಪಾಲ್ಘರ್, ವಾಪಿ, ವಲ್ಸಾಡ್, ಸೂರತ್, ಭರೂಚ್, ವಡೋದರಾ ಮತ್ತು ಆನಂದ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. ಈ ವಿಶೇಷ ರೈಲು ಒಟ್ಟು 19 ಬೋಗಿಗಳನ್ನು ಒಳಗೊಂಡಿರುತ್ತದೆ.

Home add -Advt

Related Articles

Back to top button