
ಪ್ರಗತಿವಾಹಿನಿ ಸುದ್ದಿ: ದೆಹಲಿಯ ಕೆಂಪುಕೋಟೆ ಬಳಿಯ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಫೋಟ ಪ್ರಕರಣದಲ್ಲಿ ಉಗ್ರರ ಕೈವಾಡವಿರುವುದು ಬಹುತೇಕ ಖಚಿತವಾಗಿದೆ. ವೈಟ್ ಕಾಲರ್ ಉಗ್ರರು, ಮಹಿಳಾ ಉಗ್ರರು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ. ಅದರಲ್ಲೊ ಓರ್ವ ಮಹಿಳೆಯಾಗಿದ್ದು, ಆಕೆ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಪ್ರವೃತ್ತಿಯಲ್ಲಿ ಭಯೋತ್ಪಾದಕಿ ಎಂದು ತಿಳಿದುಬಂದಿದೆ.
ಡಾ. ಶಾಹಿನ್ ಹಾಗೂ ಡಾ. ಸಜ್ಜದ್ ಎಂಬ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ. ಡಾ.ಶಾಹಿನ್ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ವಿಂಗ್ ಜಮಾತ್-ಉಲ್-ಮೊಹಿನ್ ಮಹಿಳಾ ಸಂಘಟನೆಯ ಪ್ರಮುಖಳು. ಪಾಕಿಸ್ತಾನದಲ್ಲಿ ಈ ಸಂಘಟನೆ ಆಕ್ಟಿವ್ ಆಗಿದೆ.
ಇನ್ನು ಜಮ್ಮು-ಕಾಶ್ಮೀರ ಪುಲ್ವಾಮಾದಲ್ಲಿ ಡಾ.ಸಜ್ಜದ್ ನನ್ನು ಬಂಧಿಸಲಾಗಿದೆ. ಇಬ್ಬರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.



