Belagavi NewsBelgaum NewsKarnataka News

*ವೈಫೈ ಮೋನಿಟೈಸೇಶನ್ ಒಡಂಬಡಿಕೆ ಕುರಿತು ಆರ್ ಸಿ ಯು ನಲ್ಲಿ ಸಭೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಈಗಾಗಲೇ DOPANET PVT. LTD., ಸಂಸ್ಥೆಯೊಂದಿಗೆ Wifi- Monetization ಕುರಿತು ಒಡಂಬಡಿಕೆಯನ್ನು ಮಾಡಿಕೊಂಡಿದೆ. ಅದರ ಸದುಪಯೋಗವನ್ನು ಸಂಯೋಜಿತ ಮಹಾವಿದ್ಯಾಲಯಗಳು ಪಡೆದುಕೊಳ್ಳುವ ನಿಟ್ಟಿನಲ್ಲಿ ಇಂದು ಸಭೆ ಕರೆಯಲಾಗಿತ್ತುಮ

ಇಂದು ನಡೆದ ಸಬನೆಯಲ್ಲಿ ಮಹಾವಿದ್ಯಾಲಯಗಳ ಪ್ರಾಚಾರ್ಯರು ಮತ್ತು ಇ-ವಿದ್ಯಾ ನೋಡಲ್‌ ಅಧಿಕಾರಿಗಳು ಇದ್ದರು.

Home add -Advt

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಲಪತಿಗಳಾದ ಪ್ರೊ. ಸಿ.ಎಂ. ತ್ಯಾಗರಾಜ ಇವರು ಮಾತನಾಡುತ್ತಾ, ಮುಂದುವರೆಯುತ್ತಿರುವ ತಂತ್ರಜ್ಞಾನದಲ್ಲಿ ಮತ್ತು AI ಯುಗದಲ್ಲಿ Wifi- Monetization ಸೌಲಭ್ಯವನ್ನು ತಮ್ಮ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಒದಗಿಸುವ ನಿಟ್ಟಿನಲ್ಲಿ DOPANET PVT. LTD., ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ತಮ್ಮ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಉಚಿತ Wifi ಸೇವೆಯನ್ನು ಕಲ್ಪಿಸಿಕೊಡಬೇಕೆಂದು ಪ್ರಾಚಾರ್ಯರಿಗೆ ತಿಳಿಸಿದರು.  ನಂತರದಲ್ಲಿ ಸಂಸ್ಥೆಯವರು Wifi Monetization ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಾಚಾರ್ಯರುಗಳಿಗೆ ವಿವರಿಸಿದರು.  

ಈ ಸಂದರ್ಭದಲ್ಲಿ ಕುಲಸಚಿವರಾದ ಸಂತೋಷ ಕಾಮಗೌಡ, ಮಾಹಿತಿ ತಂತ್ರಜ್ಞಾನ ಕೋಶದ ನಿರ್ದೇಶಕರಾದ ಡಾ. ಕಿರಣ ಸವಣೂರ, DOPANET PVT. LTD, ಸಂಸ್ಥೆಯ ನಿರ್ದೇಶಕರು ಮತ್ತು ಸಿಬ್ಬಂದಿಗಳು ಹಾಗೂ ಸಂಯೋಜಿತ ಮಹಾವಿದ್ಯಾಲಯಗಳ ಪ್ರಾಚಾರ್ಯರುಗಳು, ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

Back to top button