
ಊರಿಂದ ಊರಿಗೆ ಸರ್ಕಾರಿ ವಾಹನದಲ್ಲೇ ರೌಂಡ್ಸ್ ಹೊಡೆಯುತ್ತಿರುವ ಮಗ
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಅಪ್ಪನ ಸರ್ಕಾರಿ ವಾಹನಗಳನ್ನು ಮಕ್ಕಳು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಲಮಾಣಿ, ತನ್ನ ತಂದೆಯ ಸರ್ಕಾರಿ ವಾಹನದಲ್ಲಿ ಬೇಕಾ ಬಿಟ್ಟಿ ಊರೂರು ರೌಂಡ್ಸ್ ಹಾಕುತ್ತಿರುವ ಆರೋಪ ಕೇಳಿಬಂದಿದೆ.
ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅಪಘಾತಕ್ಕೀಡಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅತ್ತ ಅವರ ಮಗ ದರ್ಶನ್, ತಂದೆಯ ಸರ್ಕಾರಿ ಕಾರಿನಲ್ಲಿ ಹಾವೇರಿ ಜಿಲ್ಲೆಯಲ್ಲಿ ದರ್ಬಾರ್ ನಡೆಸುತ್ತಿದ್ದು, ತಮ್ಮದೇ ಖಾಸಗಿ ವಾಹನ ಎಂಬಂತೆ ಸರ್ಕಾರಿ ವಾಹನವನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಸರ್ಕಾರಿ ವಾಹನದಲ್ಲಿ ದರ್ಶನ್ ಲಮಾಣಿ ಓಡಾಡುತ್ತಿರುವ ದೃಶ್ಯ ಭಾರಿ ವೈರಲ್ ಆಗಿದೆ.