Kannada NewsKarnataka NewsLatest
*ಭಾರಿ ಮಳೆ: ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ*

ಪ್ರಗತಿವಾಹಿನಿ ಸುದ್ದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆ ಅಬ್ಬರಕ್ಕೆ ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿದಿದೆ.
ಜಿಲ್ಲೆಯ ಶಿರಸಿ ತಾಲೂಕಿನ ದೇವಿಮನೆ ಘಟ್ಟದ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಗುಡ್ದ ಕುಸಿದಿದ್ದು, ಮಣ್ಣು, ಕಲ್ಲುಗಳು ರಸ್ತೆಯ ಮೇಲೆ ಬಿದ್ದು ವಾಹನ ಸಂಚಾರಕ್ಕೆ ಅಡ್ದಿಯುಂಟಾಗಿದೆ.
ದೇವಿಮನೆ ಘಟ್ಟದಲ್ಲಿ ನಿನ್ನೆ ಕೂಡ ಗುಡ್ಡ ಕುಸಿತ ಸಂಭವಿಸಿತ್ತು, ಸಂಜೆ ವೇಳೆಗೆ ಮಣ್ಣು ತೆರವು ಮಾದಲಾಗಿತ್ತು. ಇಂದು ಬೆಳಗಾಗುವಷ್ಟರಲ್ಲಿ ವರುಣಾರ್ಭಟಕ್ಕೆ ಮತ್ತೆ ಹೆದ್ದಾರಿ ಮೇಲೆ ಗುಡ್ಡ ಕುಸಿದಿದ್ದು, ವಾಹನ ಸಂಚಾರಕ್ಕೆ ಆತಂಕದ ವಾತಾವರಣ ನಿರ್ಮಾಣವಾಗಿದೆ.




