Kannada NewsKarnataka NewsLatest

ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆರ್ಥಿಕ ನೆರವಿನ ಚೆಕ್ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜೀವನದಲ್ಲಿ ಆರೋಗ್ಯ ಎಲ್ಲದಕ್ಕಿಂತ ಮಹತ್ವದ್ದು. ಇಂದಿನ ಆಹಾರ, ಹವಾಮಾನ ಎಲ್ಲದಕ್ಕೂ ಹೊಂದಿಕೊಳ್ಳುವ ರೀತಿಯಲ್ಲಿ ಜೀವನ ಪದ್ಧತಿ ರೂಪಿಸಿಕೊಂಡು ಆರೋಗ್ಯವಂತರಾಗಿರಲು ಎಲ್ಲರೂ ಪ್ರಯತ್ನಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಒಟ್ಟು 17 ಜನರಿಗೆ ಅವರ ಆಸ್ಪತ್ರೆಯ ವೆಚ್ಚ ಭರಿಸುವ ಸಲುವಾಗಿ  ಮುಖ್ಯಮಂತ್ರಿ ಪರಿಹಾರ ನಿಧಿಯ ವತಿಯಿಂದ ಬಿಡುಗಡೆಗೊಂಡ ಆರ್ಥಿಕ ನೆರವಿನ ಚೆಕ್ ಗಳನ್ನು  ವಿತರಿಸಿ ಮಾತನಾಡಿದರು.

Home add -Advt

ಒಮ್ಮೆ ಆರೋಗ್ಯದ ತೊಂದರೆ ಉಂಟಾಯಿತೆಂದರೆ ಗಂಭೀರ ಕಾಯಿಲೆಗಳಾಗಿದ್ದಲ್ಲಿ ಒಬ್ಬರಿಗಾಗಿ ಇಡೀ ಕುಟುಂಬದ ಆರ್ಥಿಕ ಸ್ಥಿತಿಯೇ ಏರುಪೇರಾಗುತ್ತದೆ. ಇಂಥ ಸಂದರ್ಭಗಳು ಬಾರದಂತೆ ಎಚ್ಚರ ವಹಿಸಿಕೊಳ್ಳುವುದು ಉತ್ತಮ. ಈ ರೀತಿ ಸಂಕಷ್ಟದಲ್ಲಿರುವವರ ನೆರವಿಗೆ ಸರಕಾರದ ಯೋಜನೆಗಳಿದ್ದು ಅದರ ಸಮಯೋಚಿತ ಬಳಕೆಯಾಗಲಿ ಎಂದರು.

ಈ ಸಂದರ್ಭದಲ್ಲಿ ಯೋಜನೆಯ ನೆರವು ಪಡೆದ ಸದಸ್ಯರು, ಅವರ ಕುಟುಂಬದವರು ಹಾಜರಿದ್ದರು.

*ಭೀಕರ ರಸ್ತೆ ಅಪಘಾತ; ಹೆಲ್ತ್ ಇನ್ಸ್ ಪೆಕ್ಟರ್ ಸ್ಥಳದಲ್ಲೇ ದುರ್ಮರಣ*

https://pragati.taskdun.com/bike-accidentbbmp-health-inspectoredeath/

*ಮತ್ತೆ ನಾಲ್ವರು ಪ್ರಯಾಣಿಕರಲ್ಲಿ ಕೊರೊನಾ ದೃಢ; ಸೋಂಕಿತ ಪ್ರಯಾಣಿಕರ ಸಂಖ್ಯೆ 16ಕ್ಕೆ ಏರಿಕೆ*

https://pragati.taskdun.com/bangalore16-covid-positivebf-7-virus/

ಮೀಸಲಾತಿ, ಸಂಪುಟ ವಿಸ್ತರಣೆಗೆ ಹೈಕಮಾಂಡ್ ಕೊಡ್ತಾ ಒಪ್ಪಿಗೆ?

https://pragati.taskdun.com/high-command-gives-consent-to-reservation-cabinet-expansion/

Related Articles

Back to top button