Kannada NewsKarnataka News

ನೆರೆಹಾವಳಿ ಪಿಡಿತ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿದ ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  –   ಕಳೆದ ೨೦೧೯-೨೦ ನೇ ಸಾಲಿನಲ್ಲಿ ಆದ ನೆರೆಹಾವಳಿಯಿಂದ ಪಿಡಿತ ಉತ್ತರ ಭಾಗದ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಆಯಾ ಶಾಲೆಯ ಮುಖ್ಯೋಪಾಧ್ಯಾಯರ ಮೂಲಕ ಶಾಸಕ ಅನಿಲ ಬೆನಕೆ ವಿತರಿಸಿದರು.

ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃಧ್ದಿ ನಿಧಿಯ ಸಂಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಕೋವಿಡ್ -೧೯ ನಿಯಮಾವಳಿಗಳನ್ವಯ ಶಾಲಾ ಮಕ್ಕಳ ಅನುಪಸ್ಥಿತಿಯೊಂದಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಲಾಗುತ್ತಿದೆ.

ಕಳೆದ ವರ್ಷದಲ್ಲಿ ಆದ ಅತೀವೃಷ್ಠಿಯಿಂದ ನಗರದಲ್ಲಿನ ಕೆಲವು ಶಾಲೆಗಳು ಹಾನಿಗೊಳಗಾಗಿದ್ದವು ಇದರಿಂದ ಶಾಲೆಗಳಲ್ಲಿನ ಮಕ್ಕಳ ಕಲಿಕಾ ಸಾಮಗ್ರಿಗಳು ಸಹ ಹಾನಿಗೊಳಗಾಗಿದ್ದರಿಂದ  ಹಾನಿಗೊಳಗಾದ ಶಾಲೆಗಳಿಗೆ ಕಲಿಕಾ ಸಾಮಗ್ರಿಗಳಾದ ಪುಸ್ತಕ, ಪೆನ್ನು, ಬ್ಯಾಗ್ ಹಾಗೂ ಇನ್ನಿತರೆ ಅವಶ್ಯಕ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಶಾಲೆಗಳ ಅಭಿವೃಧ್ದಿಗಾಗಿ ಶ್ರಮಿಸಲಾಗುವುದು ಎಂದರು.

ಜೊತೆಗೆ ನಗರದ ಜನತೆಯು ಕೋರೋನಾ ವೈರಸ್ ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ನಿಯಮಾವಳಿಗಳನ್ನು ಪಾಲಿಸಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ  ಬೆಳಗಾವಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಭಜಂತ್ರಿ, ಎಲ್ಲ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.

 

 ರಹವಾಸಿಗಳೊಂದಿಗೆ ಶಾಸಕ ಅನಿಲ ಬೆನಕೆ ಚರ್ಚೆ

ಶಾಸಕ ಅನಿಲ ಬೆನಕೆ ಬೆಳಗಾವಿ ಉತ್ತರ ಮತಕ್ಷೇತ್ರದ ಶ್ರೀನಗರದ ಅಂಬೇಡ್ಕರ ಭವನ ಹಾಗೂ ವಂಟಮೂರಿ ಕಾಲೊನಿ ಅಂಬೇಡ್ಕರ ಸರ್ಕಲ್ ಗೆ ಭೇಟಿ ನೀಡಿ ರಹವಾಸಿಗಳೊಂದಿಗೆ ಅಂಬೇಡ್ಕರ ಭವನ ಹಾಗೂ ಅಂಬೇಡ್ಕರ ವೃತ್ತದ ಅಭಿವೃಧ್ದಿಯ ಬಗ್ಗೆ ಚರ್ಚಿಸಿದರು.
ಅಲ್ಲಿನ ರಹವಾಸಿಗಳ  ಸಲಹೆಯಂತೆ ಅಂಬೇಡ್ಕರ ಭವನ ಹಾಗೂ ಅಂಬೇಡ್ಕರ ವೃತ್ತದ ಅಭಿವೃದ್ದಿಯ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದು ಬೆನಕೆ ತಿಳಿಸಿದರು. ಈಗಾಗಲೇ ನಗರದ ಹಲವೆಡೆ ರಸ್ತೆ, ಗಟಾರ ಹಾಗೂ ಇನ್ನಿತರೆ ಅಭಿವೃಧ್ದಿ ಕಾಮಗಾರಿಗಳು ಚಾಲನೆಯಲ್ಲಿರುವುದರಿಂದ ನಗರದ ಯಾವುದೇ ಸಮಸ್ಯೆಗಳಿದ್ದರೆ ಕಾರ್ಯಾಲಯಕ್ಕೆ ಸಂಪರ್ಕಿಸುವಂತೆ ಅವರು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button