ಡಿ.ಕೆ.ಶಿವಕುಮಾರ ತಿಹಾರ್ ಜೈಲಿಗೆ ಸ್ಥಳಾಂತರ, ಇಂದು ಬಿಡುಗಡೆ ಕಷ್ಟ
ಪ್ರಗತಿವಾಹಿನಿ ಸುದ್ದಿ, ನವದೆಹಲಿ -ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ ಅವರನ್ನು ಇಂದು ಬೆಳಗ್ಗೆ ನವದೆಹಲಿಯ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಗಿದೆ.
2 ದಿನಗಳ ಹಿಂದೆಯೇ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಡಿ.ಕೆ.ಶಿವಕುಮಾರ ಆರೋಗ್ಯ ಸರಿ ಇಲ್ಲದ ಕಾರಣ ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಆರೋಗ್ಯ ಸುಧಾರಿಸಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
ತಿಹಾರ್ ಜೈಲಿನ ಸೆಲ್ ನಂಬರ್ 7ರಲ್ಲಿ ಶಿವಕುಮಾರ್ ಅವರಿಗೆ ಯಾವುದೇ ವಿಶೇಷ ಸೌಲಭ್ಯ ನೀಡಲಾಗಿಲ್ಲ. ಸಾಮಾನ್ಯ ವಿಚಾರಣಾಧೀನ ಕೈದಿಗಳಂತೆ ಇವರಿಗೂ ತಿಂಡಿ, ತಿನಿಸು ನೀಡಲಾಗುತ್ತದೆ. ಮಲಗಲು ಒಂದು ಚಾಪೆ, ದಿಂಬು ನೀಡಲಾಗುತ್ತದೆ. ನಿರ್ಧಿಷ್ಟ ಸಮಯದಲ್ಲಿ ಟಿವಿ ನೋಡಲು ಅವಕಾಶ ನೀಡಲಾಗುತ್ತದೆ. ಫ್ಯಾನ್, ಪತ್ರಿಕೆ ಇರುತ್ತದೆ.
ಇಂದು ಮಧ್ಯಾಹ್ನ ವಿಚಾರಣೆ
ಡಿ.ಕೆ.ಶಿವಕುಮಾರ ಅವರ ಜಾಮೀನು ಅರ್ಜಿಯ ಕುರಿತು ಇಂದು ಮಧ್ಯಾಹ್ನ ವಿಚಾರಣೆ ಮುಂದುವರಿಯಲಿದೆ. ನಿನ್ನೆ ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ವಕೀಲರು ಗೈರಾಗಿದ್ದರಿಂದ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿತ್ತು. ಜಾಮೀನು ಸಿಗುವವರೆಗೂ ಅವರು ತಿಹಾರ್ ಜೈಲಿನಲ್ಲೇ ಇರಬೇಕಾಗುತ್ತದೆ.
ಇಂದು ಜಾಮೀನು ಸಿಕ್ಕಿದರೂ ಆದೇಶ ಪ್ರತಿ ತಂದು ಕೊಡುವುದ ಸೇರಿದಂತೆ ಇತರ ನಿಯಮಾವಳಿಗಳನ್ನು ಇಂದೇ ಪೂರೈಸುವುದು ಕಷ್ಟವಾಗಹದು. ಹಾಗಾಗಿ ಇವತ್ತು ಒಂದು ದಿನ ತಿಹಾರ್ ಜೈಲಿನಲ್ಲಿ ಇರಬೇಕಾಗಬಹುದು.
ಈ ಮಧ್ಯೆ ಬೆಲಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ. ಇಂದು ಬೆಳಗ್ಗೆ 11 ಗಂಟೆಯಿಂದ ವಾಚಾರಣೆ ನಡೆಯುತ್ತಿದ್ದು, ಇನ್ನೂ ಮುಂದುವರಿದಿದೆ.
ಡಿ.ಕೆ.ಶಿವಕುಮಾರ ಅವರನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸಿರುವ ಹಿನ್ನೆಲೆಯಲ್ಲಿ ರಾಮನಗರ, ಕನಕಪುರಗಳಲ್ಲಿ ಪೊಲೀಸ್ ಬಂದೋಬಸ್ತನ್ನು ಬಿಗಿಗೊಳಿಸಲಾಗಿದೆ.
ಇಂದೂ ಆಸ್ಪತ್ರೆಯಲ್ಲೇ ಇರಲಿದ್ದಾರೆ ಡಿ.ಕೆ.ಶಿವಕುಮಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ