Latest

ಮೂರು ಕಿ.ಮೀ ಓಡಿ ಆಸ್ಪತ್ರೆ ತಲುಪಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವೈದ್ಯರೊಬ್ಬರು ಅತೀ ಮಹತ್ವದ ಶಸ್ತ್ರ ಚಿಕಿತ್ಸೆ ಕೈಗೊಳ್ಳಲು ಆಸ್ಪತ್ರೆಗೆ ತೆರಳುತ್ತಿರುವಾಗ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿದ್ದಾರೆ. ಗಂಟೆಗಳವರೆಗೆ ಟ್ರಾಫಿಕ್ ತೆರವಾಗದ ಹಿನ್ನೆಲೆಯಲ್ಲಿ ಓಡುತ್ತಲೇ ಆಸ್ಪತ್ರೆ ತಲುಪಿ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ಇಂಥದ್ದೊಂದು ಕುತೂಹಲಕಾರಿ ವಿದ್ಯಮಾನ ಬೆಂಗಳೂರಿನಲ್ಲಿ ನಡೆದಿದೆ.

ಖಾಸಗಿ ಆಸ್ಪತ್ರೆಯೊಂದರ ಗ್ಯಾಸ್ಟ್ರೋ ಎಂಟರಾಲಜಿ ತಜ್ಞ ವೈದ್ಯ ಡಾ. ಗೋವಿಂದರಾವ ನಂದಕುಮಾರ ಆಸ್ಪತ್ರೆಗೆ ತೆರಳುತ್ತಿದ್ದಾಗ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡಿದ್ದಾರೆ.  ಅವರು ಕೆಲವೇ ಹೊತ್ತಿನಲ್ಲಿ ಮಹಿಳೆಯೊಬ್ಬರಿಗೆ ಅತ್ಯಂತ ಮಹತ್ವದ ಶಸ್ತ್ರ ಚಿಕಿತ್ಸೆಯನ್ನು ಕೈಗೊಳ್ಳಬೇಕಿತ್ತು.

ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿ ಕಾಯುವುದಕ್ಕಿಂತ ಓಡಿ ಹೋದರೆ ಬೇಗ ಆಸ್ಪತ್ರೆ ತಲುಪಬಹುದು ಎಂದು ನಿರ್ಧರಿಸಿದ ವೈದ್ಯರು ಸುಮಾರು ಮೂರು ಕಿಮೀ ದೂರವನ್ನು ಓಡುತ್ತ ಸಮಯ ಮಿಂಚುವುದರ ಒಳಗೆ ಆಸ್ಪತ್ರೆಗೆ ತಲುಪಿದ್ದಾರೆ.

ಬಳಿಕ ಮಹಿಳೆಯೊಬ್ಬರಿಗೆ ಗಾಲ್ ಬ್ಲಾಡರ್ ಲ್ಯಾಪರೋಸ್ಕೋಪಿ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ. ಆ ಬಳಿಕ ಡಾ. ಗೋವಿಂದ ಅವರು ತಾವು ಆಸ್ಪತ್ರೆಗೆ ಓಡುತ್ತ ಹೋಗುವ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

Home add -Advt

ಬಾಲಾರೋಪಿ ಸೇರಿ ಐವರು ಸರಗಳ್ಳರ ಬಂಧನ

https://pragati.taskdun.com/latest/thetf-caseharugeri-police%e0%b3%ab-accused-arrest/

Related Articles

Back to top button