Latest

8ನೇ ವರ್ಷಕ್ಕೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರಂತೆ ಡಿಸೈನರ್ ರೋಹಿತ್ ವರ್ಮಾ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಬಿಗ್ ಬಾಸ್- 3 ನಲ್ಲಿ ತನ್ನ ಕಾರ್ಯಚಟುವಟಿಕೆಗಳಿಂದ ಹೆಸರುವಾಸಿಯಾದ ಜನಪ್ರಿಯ ಡಿಸೈನರ್ ರೋಹಿತ್ ವರ್ಮಾ, ತನ್ನ Uncle ಕೈಯಲ್ಲಿ ಲೈಂಗಿಕ ದೌರ್ಜನ್ಯವನ್ನು ಎದುರಿಸುತ್ತಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಹೊಸ ಸಂದರ್ಶನವೊಂದರಲ್ಲಿ, ಡಿಸೈನರ್ ತನ್ನ ಬಾಲ್ಯದ ದಿನಗಳಲ್ಲಿ ತನ್ನ Uncle ನಿಂದಲೇ ಅತ್ಯಾಚಾರಕ್ಕೊಳಗಾದ  ವಿಷಯದ ಜೊತೆಗೇ ಕೆಲವು ಆಘಾತಕಾರಿ ವಿಷಯಗಳನ್ನು ಆರ್‌ಜೆ ಸಿದ್ಧಾರ್ಥ್ ಕಾನನ್ ಅವರೊಂದಿಗೆ ಮಾತನಾಡುತ್ತ ಹೇಳಿಕೊಂಡಿದ್ದಾರೆ.

Home add -Advt

ರೋಹಿತ್ ತನ್ನ ಮೂಲಭೂತ ಅಗತ್ಯಗಳನ್ನು ಪೂರೈಸಲು ಹಣಕ್ಕಾಗಿ ವೇಶ್ಯಾವಾಟಿಕೆ ಮಾಡಿದ ಬಗ್ಗೆ  ಹೇಳಿಕೊಂಡರು. ಅವರು ಕೇವಲ 8 ವರ್ಷದವರಾಗಿದ್ದಾಗ ಅವರ Uncle ತನ್ನನ್ನು ‘ಅತ್ಯಾಚಾರ’ ಮಾಡಿದ್ದಾರೆ ಎಂದು ಅವರು ಬಹಿರಂಗಪಡಿಸಿದರು.

“ನಾನು ತುಂಬಾ ಒಳ್ಳೆಯ ಕುಟುಂಬದಿಂದ ಬಂದವನು. ಆದರೂ, ನನ್ನ Uncle ನಿಂದ ನನ್ನ ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಆತ ನನಗೆ ಸೀರೆ ಉಡಿಸಿ, ಮೈಮೇಲೆ ಬಿಸಿ ಮೇಣ ಹಚ್ಚಿ ಅದಕ್ಕಿಂತ ಭಯಾನಕ ದೌರ್ಜನ್ಯ ಎಸಗುತ್ತಿದ್ದರು. ಇದೆಲ್ಲ ಮೂರ್ನಾಲ್ಕು ವರ್ಷಗಳ ಕಾಲ ನಡೆದಿತ್ತು. ಭಯದಿಂದ ನಾನು ಈ ಬಗ್ಗೆ ನನ್ನ ಪೋಷಕರಿಗೆ ಹೇಳಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

ಉಮೇಶ್ ಕತ್ತಿ ಪಾರ್ಥಿವ ಶರೀರ ಏರ್ ಲಿಫ್ಟ್ ಗೆ ವಿಳಂಬ

Related Articles

Back to top button