
ಪ್ರಗತಿವಾಹಿನಿ ಸುದ್ದಿ : ಮಿಗ್-29 ಯುದ್ಧ ವಿಮಾನವು ಪತನಗೊಂಡ ಘಟನೆ ಇಂದು ಉತ್ತರ ಪ್ರದೇಶದ ಆಗ್ರಾ ಬಳಿ ನಡೆದಿದೆ. ಅದೃಷ್ಟವಶತ್ ಘಟನೆಯಲ್ಲಿ ಪೈಲೆಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯುದ್ಧ ವಿಮಾನವು ಅಭ್ಯಾಸಕ್ಕೆಂದು ಪಂಜಾಬ್‌ನ ಆದಂಪುರದಿಂದ ಬೇಸ್‌ನಿಂದ ಟೇಕಾಫ್ ಆಗಿದ್ದು, ಆಗ್ರಾಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ಸದ್ಯ ನಿಖರ ಕಾರಣ ತಿಳಿದುಬಂದಿಲ್ಲ. ವಿಮಾನವು ಧಗಧಗ ಹೊತ್ತಿ ಉರಿದಿದ್ದು, ಘಟನೆ ಸಂಬಂಧ ರಕ್ಷಣಾ ಇಲಾಖೆಯು ತನಿಖೆಗೆ ಆದೇಶಿಸಿದೆ. ಹೊಲವೊಂದರಲ್ಲಿ ವಿಮಾನ ಪತನಗೊಂಡಿದ್ದು, ಸ್ಥಳೀಯರು ಕಿಕ್ಕಿರಿದು ಸ್ಥಳದಲ್ಲೇ ಸೇರಿದ ದೃಶ್ಯಕಂಡುಬಂತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ