20 ದಿನಗಳ ಕಾಲ ಉಚಿತ ಚಿಕಿತ್ಸಾ ಶಿಬಿರಕ್ಕೆ ಚಾಲನೆ
ಪ್ರಗತಿವಾಹಿನಿ ಸುದ್ದಿ – ಅಥಣಿ : ಅಥಣಿಯ ಸುಕ್ಷೇತ್ರ ಮೋಟಗಿ ಮಠದ ಆವರಣದಲ್ಲಿ ಸುಮಾರು 20 ದಿನಗಳ ಕಾಲ ಉಚಿತ ಅಕ್ಯುಪ್ರೇಷರ್ ಎನರ್ಜಿ ಮ್ಯಾಗ್ನೆಟಿಕ ಚಿಕಿತ್ಸಾ ಕಾರ್ಯಕ್ರವನ್ನ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮಕ್ಕೆ ಮರಳುಸಿದ್ದ ಶ್ರೀಗಳು ಚಾಲನೆ ನೀಡಿದರು .
ಕರ್ನಾಟಕ ಆಯಸ್ಕಾಂತ ಆರೋಗ್ಯ ಸೇವಾ ಸಮೀತಿ ಮತ್ತು ರಾಷ್ಟ್ರೀಯ ಮಾಳಿವಾಣಿ ವತಿಯಿಂದ ಗುರುವಾರ ಅಥಣಿ ಪಟ್ಟಣದ ಶೆಟ್ಟರಮಠದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮವನ್ನ ಉದ್ಘಾಟಿಸಿದರು.
ಮಾತನಾಡಿದ ಅವರು ಈ ಮ್ಯಾಗ್ನೇಟಿಕ್ ತಂತ್ರಜ್ಞಾನದಿಂದ ನೀಡಿದಂತಹ ಉಚಿತ ಚಿಕಿತ್ಸೆಯ ಲಾಭವನ್ನು ಪಡೆದುಕೊಂಡು ಆರೋಗ್ಯವಂತರಾಗಿ. ಇತ್ತೀಚಿನ ದಿನಗಳಲ್ಲಿ ಹಣವನ್ನು ಕೊಟ್ಟು ವೈದ್ಯಕೀಯ ಚಿಕಿತ್ಸೆಯನ್ನು ನೀಡುವಂತಹ ಕಾಲದಲ್ಲಿ ಉಚಿತವಾಗಿ ಸೇವೆಯನ್ನು ನಿಡುತ್ತಿರುವಂತಹ ಡಾ ಡಿ ಕೆ ಶ್ರೀನಿವಾಸ ಹಾಗೂ ಅವರ ಸಂಪೂರ್ಣ ತಂಡಕ್ಕೆ ಅಥಣಿ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಉಚಿತ ಚಿಕಿತ್ಸಾ ತರಬೇತಿ ನೀಡುತ್ತಿರುವ ಡಾ ಡಿ ಕೆ ಶ್ರೀನಿವಾಸ ಅವರು ಮಾತನಾಡಿ, ಯಾವುದೇ ರೀತಿಯ ಅಡ್ಡ ಪರಿಣಾಮವನ್ನು ಬೀರದಂತಹ ಸುಲಭ ಮ್ಯಾಗ್ನೇಟಿಕ ಸಾಧನಗಳ ಮೂಲಕವಾಗಿ ಮಾನವನಿಗೆ ಸುಲಭವಾಗಿ ನೋವು ನಿವಾರಣೆಯಾಗುವ ಚಿಕಿತ್ಸೆ ಇದಾಗಿದೆ. ಸುಮಾರು 20 ದಿನಗಳ ಕಾಲ ಉಚಿತ ತರಬೇತಿಯನ್ನ ನೀಡುತ್ತಿದ್ದು ಅದರ ಸದುಪಯೊಗವನ್ನು ಅಥಣಿಯ ಜನರು ಮಾಡಿಕೊಳ್ಳಬೇಕಾಗಿ ಸಾರ್ವಜನಿಕರಲ್ಲಿ ವಿನಂತಿಸಿದರು. ಮಂಡಿ ನೋವು ,ಸೊಂಟ ನೊವು , ಸಂಧಿವಾತ ಹೀಗೆ ಇನ್ನಿತರ ಹಲವಾರು ರೋಗಗಳಿಗೆ ಉಚಿತವಾಗಿ ತರಬೇತಿ ನೀಡುತ್ತೇವೆ. ಅಥಣಿ ಜನತೆ ಚಿಕಿತ್ಸೆ ತಗೆದುಕೊಳ್ಳಬೇಕೆಂದು ತಿಳಿಸಿದರು.
ಈ ವೇಳೆ ಸುಬಾಸ ಮಾಳಿ , ಮಲ್ಲಿಕಾರ್ಜುಜುನ ಬಾಳಿಕಾಯಿ , ಮಹಾದೇವ ಮಾಳಿ ಹಾಗೂ ಇನ್ನಿತರರು ಭಾಗಿಯಾಗಿದ್ದರು .///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ