Kannada NewsKarnataka NewsLatest

ನಿಮ್ಮ ಪಡಿತರ ಸ್ಥಗಿತಗೊಳ್ಳಬಾರದೆಂದರೆ ತಕ್ಷಣ ಇದನ್ನು ಮಾಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜಿಲ್ಲೆಯ ಪಡಿತರ ಚೀಟದಾರರು ಸಮೀಪದ ನ್ಯಾಯಬೆಲೆ ಅಂಗಡಿಗೆ ಹೋಗಿ ಇ- ಕೆವೈಸಿಯನ್ನು ಮಾಡಿಸಿಕೊಳ್ಳುಲು ಇಲಾಖೆಯ  ತಂತ್ರಾಂಶದಲ್ಲಿ ಜೂನ್ ಕೊನೆಯವರೆಗೂ  ಅವಕಾಶವನ್ನು ಕಲ್ಪಿಸಲಾಗಿದೆ.

ಬಾಕಿ ಉಳಿದ ಪಡಿತರ ಚೀಟದಾರರು ಮುಂದಿನ ದಿನಳಲ್ಲಿ ನಿರಂತರವಾಗಿ ಪಡಿತರ ಪದಾರ್ಥಗಳನ್ನು ಪಡೆಯಲು ಕಡ್ಡಾಯವಾಗಿ ಇ-ಕೆವೈಸಿ ಯನ್ನು ಮಾಡಿಸಿಕೊಳ್ಳುಬೇಕು ಒಂದು ವೇಳೆ ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಸ್ಥಗಿತಗೊಳ್ಳಲಿದೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯಹಾರಗಳ ಇಲಾಖೆಯ ಆಯುಕ್ತರ ಜೊತೆಗೆ  ವಿಡಿಯೋ ಸಂವಾದದಲ್ಲಿ ಇ-ಕೆವೈಸಿ ಕುರಿತಾಗಿ ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೬೮.೯೬೦ ಅಂತ್ಯೋದಯ ಚೀಟಿಗಳ ಪೈಕಿ ೫೦.೦೫೧ ಪಡಿತರದಾರರು ಇ-ಕೆವೈಸಿ ಮಾಡಿಸಿಕೊಂಡಿದ್ದು, ೧೮.೯೦೯ ಪಡಿತರದಾರರು ಬಾಕಿ ಉಳಿದುಕೊಂಡಿದ್ದಾರೆ.

೧೦.೭೫.೬೩೫ ಬಿಪಿಎಲ್ ಪಡಿತರ ಚೀಟಿಗಳ ಪೈಕಿ ೮.೯೨.೩೯೨ ಪಡಿತರದಾರರು ಇ-ಕೆವೈಸಿ ಮಾಡಿಸಿಕೊಂಡಿದ್ದು ೧,೮೩,೨೪೩ ಪಡಿತರದಾರರು ಬಾಕಿ ಉಳಿದುಕೊಂಡಿದ್ದಾರೆ. ಜೂನ್ ಅಂತ್ಯದೊಳಗಾಗಿ ಬಾಕಿ ಉಳಿದ ಪಡಿತರದಾರರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಲೇಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುಪಿಎಸ್ ಸಿಯಲ್ಲಿ ಆಯ್ಕೆ ಎಂದು ಸನ್ಮಾನ; ಆಯ್ಕೆಯಾಗಿಲ್ಲ, ಕ್ಷಮಿಸಿ ಬಿಡಿ ಎಂದ ಯುವತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button