NationalPolitics

*ಕರ್ನಾಟಕದಲ್ಲಿ ‘ನಾಥ್ ಮಾದರಿ’ ಆಪರೆಷನ್ ನಡೆಯಲಿದೆ; ಹೊಸ ಬಾಂಬ್ ಸಿಡಿಸಿದ ‘ಮಹಾ’ ಸಿಎಂ*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದ ಸರ್ಕಾರ ಪತನವಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ತಿಳಿಸಿದ್ದಾರೆ.

ಮಹಾರಾಷ್ಟ್ರದ ಸತಾರದಲ್ಲಿ ಮಾತನಾಡಿದ ಏಕನಾಥ್ ಶಿಂಧೆ, ಕರ್ನಾಟಕದಲ್ಲಿ ನಾಥ್ ಮಾದರಿ ಆಪರೇಷನ್ ಮಾಡಲು ಅಲ್ಲಿನ ಬಿಜೆಪಿ ನಾಯಕರಿಂದಲೇ ತನಗೆ ತೆರೆಮಎಯ ಆಹ್ವಾನ ಬಂದಿದೆ. ಚುನವಣೆ ಬಳಿಕ ನಾನು ಕರ್ನಾಟಕಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿಯೂ ನಮ್ಮಲ್ಲಿ ಆದಂತೆ ಏನೇನೋ ರಾಜಕೀಯಗಳು ನಡೆಯುತ್ತಿವೆ. ನಮ್ಮ ನಾಥ್ ಮಾದರುಇ ಆಪರೇಷನ್ ಈಗ ಎಲ್ಲೆಡೆ ಪ್ರಸಿದ್ಧಿಯಾಗಿದೆ. ಬೆಳಗಾವಿಗೆ ನಾನು ಭೇಟಿ ನೀಡಿದಾಗ ಕೆಲ ಬಿಜೆಪಿ ನಯಕರು ನನ್ನನ್ನು ಭೇಟಿಯಾಗಿದ್ದರು. ಈ ವೇಳೆ ನಾಥ್ ಮದರಿ ಆಪರೇಷನ್ ಗೆ ನನಗೆ ಆಹ್ವಾನಿಸಿದ್ದಾರೆ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.

ಕರ್ನಾಟಕ ರಾಜಕೀಯದಲ್ಲಿ ಮತ್ತೆ ಬದಲಾವಣೆ ವಿಚಾರವಾಗಿ ಮಹಾರಾಷ್ಟ್ರ ಸಿಎಮ್ ನೀಡಿರುವ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button