ಪ್ರಗತಿವಾಹಿನಿ ಸುದ್ದಿ, ಬಾಗಲಕೋಟ: ಉದ್ಯೋಗ ಮೇಳಗಳು ಗ್ರಾಮೀಣ ಪ್ರದೇಶದ ವಿದ್ಯಾವಂತರಿಗೆ ಅವಕಾಶ ತೆರೆದಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾವಂತ ಯುವಕರು ಸ್ವಂತ ಉದ್ಯಮ ಸ್ಥಾಪಿಸಲು ಸಜ್ಜಾದಲ್ಲಿ ಸರ್ಕಾರ ಅವರ ಬೆನ್ನಿಗೆ ನಿಲ್ಲುತ್ತದೆ ಎಂದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹೇಳಿದರು.
ನಿರಾಣಿ ಫೌಂಡೇಶನ್ ಹಾಗೂ ಬಿಜೆಪಿ ಬೀಳಗಿ ಯುವ ಘಟಕದಿಂದ ತೇಜಸ್ಅಂತಾರಾಷ್ಟ್ರೀಯ ಶಾಲೆಯಲ್ಲಿ ನಡೆದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭೆ ಇರುವವರಿಗೆ ಅವಕಾಶಗಳು ಕಡಿಮೆ ಇಲ್ಲ. ಯುವಕರು ಸತತ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಮುನ್ನುಗ್ಗಿದರೆ ಯಶಸ್ವಿಯಾಗಬಹುದು ಎಂದು ಅವರು ಹೇಳಿದರು.
ಸಾನಿಧ್ಯ ವಹಿಸಿ ಮಾತನಾಡಿದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಈ ಭಾಗದ ಯುವ ಸಮುದಾಯಕ್ಕೆ ಮುರುಗೇಶ ನಿರಾಣಿ ಪ್ರೇರಣೆಯಾಗಿದ್ದಾರೆ. ಫೌಂಡೇಶನ್ ಸಮಾಜ ಕಟ್ಟುವ ಕಾರ್ಯವನ್ನು ಶಿಸ್ತುಬದ್ಧವಾಗಿ ಮಾಡುತ್ತಿದೆ ಎಂದರು.
ಸಮಾರೋಪ ಸಮಾರಂಭದಲ್ಲಿ ಆಯ್ಕೆಯಾದವರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಫೌಂಡೇಶನ್ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಸ್ವಾವಲಂಬಿ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಫೌಂಡೇಶನ್ ನ ಧ್ಯೇಯವಾಗಿದೆ. ಅಗಸ್ಟ್ ತಿಂಗಳಲ್ಲಿ 100 ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಗುವುದು ಎಂದು ಹೇಳಿದರು.
ಉದ್ಯೋಗ ಮೇಳದಲ್ಲಿ 78 ಕಂಪನಿಗಳು ಭಾಗವಹಿಸಿದ್ದು, 2345 ಅಭ್ಯರ್ಥಿಗಳು ಭಾಗವಹಿಸಿದ್ದು 823 ಅಭ್ಯರ್ಥಿಗಳು ನೇಮಕಾತಿ ಹಾಗೂ ದ್ವಿತಿಯ ಹಂತದ ಸಂದರ್ಶನಕ್ಕೆ ಆಯ್ಕೆಯಾದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಪ್ರಸ್ತಾವಿಕ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಗಿರೀಶ ಕಂಠಿ, ವೀರಣ್ಣ ತೋಟದ, ಈರಣ್ಣ ಗಿಡ್ಡಪ್ಪನವರ, ಹೊಳಬಸು ಬಾಳಶೆಟ್ಟರ, ಶಿವನಗೌಡ ಪಾಟೀಲ, ಗಿರಿಮಲ್ಲಯ್ಯ ಗಣಾಚಾರಿ, ಭೀಮಶಿ ಮಗದುಮ್, ಜಗತ್ಕಣ ವಿ, ಗಿರೀಶ ಅಂಗಡಿ, ಸೋಮನಗೌಡ ಪಾಟೀಲ, ಕೊಳದೂರ ಉಪಸ್ಥಿತರಿದ್ದರು.
ಜುಲೈ 13ರಿಂದ ಸ್ವರ್ಣವಲ್ಲೀ ಶ್ರೀಗಳವರ 32ನೇ ಚಾತುರ್ಮಾಸ್ಯ ವೃತ ಸಂಕಲ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ