*ಯಶಸ್ವಿಯಾಗಿ ನಡೆದ ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ*


ಪ್ರಗತಿವಾಹಿನಿ ಸುದ್ದಿ: ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಬೆಳಗಾವಿಯಲ್ಲಿ 3 ದಿನಗಳ ಕಾಲ ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.
ಬೆಳಗಾವಿಯ ಕನ್ನಡ ಭವನದಲ್ಲಿ ನವೆಂಬರ್ 7ರಂದು ರಂಗಸಂಪದ ಬೆಳಗಾವಿ ಇವರಿಂದ ನಕ್ಷತ್ರ ಯಾತ್ರಿಕರು ನಾಟಕ ಪ್ರದರ್ಶನಗೊಂಡಿತು. ಸಂಧ್ಯಾ ಎಸ್. ರಚಿಸಿದ ಈ ನಾಟಕವನ್ನು ಸವಿತಾ ಭೈರಪ್ಪ ನಿರ್ದೇಶಿಸಿದ್ದರು. ಶ್ರೀಪತಿ ಮಂಜನಬೈಲು ಅವರ ಸಂಗೀತವಿತ್ತು. ಇದೇ ವೇಳೆ ನಾಟಕಕಾರ ರಂಗ ನಿರ್ದೇಶಕ ಝಕೀರ ನದಾಫ ರಚನೆಯ ನೆಲಮುಗಿಲು ಮತ್ತು ಹಾಲು ಬಟ್ಟಲದೊಳಗಿನ ಪಾಲು ನಾಟಕ ಕೃತಿ ಲೋಕಾರ್ಪಣೆಗೊಂಡವು. ನೀಲಗಂಗಾ ಚರಂತಿಮಠ, ಡಾ. ಗುರುದೇವಿ ಹುಲೆಪ್ಪನವರಮಠ, ಸುಭಾಸ್ ಏಣಗಿ, ಸರ್ಜೂ ಕಾಟ್ಕರ್, ಶೈಲಜಾ ಭಿಂಗೆ, ಅರವಿಂದ ಕುಲಕರ್ಣಿ, ಸವಿತಾ ಭೈರಪ್ಪ, ಎಂ.ಕೆ.ಹೆಗಡೆ ಇವರುಗಳನ್ನು ಗೌರವಿಸಲಾಯಿತು.


ನವೆಂಬರ್ 8ರಂದು ಬಸವರಾಜ ಜಗಜಂಪಿ, ರಮೇಶ್ ಜಂಗಲ್, ಶಿರೀಷ ಜೋಶಿ, ವಿನೋದ ಅಂಬೇಕರ, ಬಾಬಾಸಾಹೇಬ ಕಾಂಬ್ಳೆ, ಪಿ.ಜಿ. ಕೆಂಪಣ್ಣವರ, ಡಾ. ರಾಮಕೃಷ್ಣ ಮರಾಠೆ, ಬಸವರಾಜ ನಿಂಬಾಳ, ಡಾ.ರಾಜಶೇಖರ ಮೊದಲಾದವರಿಗೆ ಗೌರವಾರ್ಪಣೆ ನಡೆಯಿತು. ನಂತರದಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ ಸವದತ್ತಿ (ರಿ) ಇವರಿಂದ ಮಂಜು ನಾಯಕ್ ಚಳ್ಳೂರು ರವರ ಕಥೆಯಾಧಾರಿತ ಹಾಲು ಬಟ್ಟಲದೊಳಗಿನ ಪಾಲು ನಾಟಕ ಪ್ರದರ್ಶನಗೊಂಡಿತು. ಈ ನಾಟಕವನ್ನು ಝಕೀರ ನದಾಫ ರಚಿಸಿ ನಿರ್ದೇಶಿಸಿದ್ದರು.

ಭಾನುವಾರ ಸಮಾರೋಪ ಸಂದರ್ಭದಲ್ಲಿ ಎಲ್.ಎಸ್. ಶಾಸ್ತ್ರಿ, ಯ.ರು. ಪಾಟೀಲ, ಬಸವರಾಜ ರೊಟ್ಟಿ, ಮಧುಕರ ಗುಂಡೇನಟ್ಟಿ, ರವಿ ಕೊಟಾರಗಸ್ತಿ, ಆನಂದ ಪುರಾಣಿಕ, ಎಸ್.ಎ. ಅರಕೇರಿ, ಅರವಿಂದ ಹುನಗುಂದ, ರವಿ ಭಜಂತ್ರಿ, ಹೊಸಳ್ಳಿ ಮೊದಲಾದವರಿಗೆ ಗೌರವಾರ್ಪಣೆ ಮಾಡಲಾಯಿತು.
ಝಕೀರ್ ನದಾಫ್ ಸ್ವಾಗತಿಸಿದರು. ಶಿವಾನಂದ ತಾರಿಹಾಳ ಸ್ವಾಗತಿಸಿದರು. ಎಲ್.ಎಸ್. ಶಾಸ್ತ್ರಿ, ಯ.ರು.ಪಾಟೀಲ್, ಸುಭಾಷ ಏಣಗಿ ಅಭಿಪ್ರಾಯ ವ್ಯಕ್ತಪಡಿಸಿದರು.
ರಂಗಸೃಷ್ಟಿ ಹಾಗೂ ಕನ್ನಡ ಭವನದ ಪರವಾಗಿ ಝಕೀರ್ ನದಾಫ್ ಅವರನ್ನು ಸನ್ಮಾನಿಸಲಾಯಿತು.
ನಂತರದಲ್ಲಿ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ) ಸವದತ್ತಿ ಇವರಿಂದ ನೆಲಮುಗಿಲು ನಾಟಕ ಪ್ರದರ್ಶನಗೊಂಡಿತು. ಈ ನಾಟಕವನ್ನು ಝಕೀರ ನದಾಫ ರಚಸಿ, ನಿರ್ದೇಶಿಸಿದ್ದರು.
ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗ ಸೃಷ್ಟಿ ಕಲಾತಂಡ ಹಾಗೂ ಬೆಳಗಾವಿಯ ಕನ್ನಡ ಭವನ ದ ಸಹಯೋಗದೊಂದಿಗೆ ನಾಟಕೋತ್ಸವ ನಡೆಯಿತು.

ದಿವಂಗತ ಏಣಗಿ ಬಾಳಪ್ಪನವರನ್ನು ಸ್ಮರಿಸಿಕೊಳ್ಳುವ ನಿಮಿತ್ಯ ಹಾಗೂ ಬೆಳಗಾವಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಏಣಗಿ ಬಾಳಪ್ಪನವರ ಹೆಸರಿನಲ್ಲಿ ರಂಗಮಂದಿರಗಳು ನಿರ್ಮಾಣಗೊಳ್ಳಬೇಕು ಹಾಗೂ ಏಣಗಿಯಲ್ಲಿ ನಾಟ್ಯ ಭೂಷಣ ಬಾಳಪ್ಪನವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣಗೊಳ್ಳಬೇಕೆಂದು ಸರ್ಕಾರದ ಗಮನ ಸೆಳೆಯುವ ಕಾರಣಕ್ಕಾಗಿ ಅವರ ಹೆಸರಿನಲ್ಲಿ ನಾಟ್ಯ ಭೂಷಣ ಏಣಗಿ ಬಾಳಪ್ಪ ಸ್ಮರಣೋತ್ಸವ ದ ನಾಟಕೋತ್ಸವವನ್ನು ಏರ್ಪಡಿಸಲಾಗಿತ್ತು.
ಈ ನಾಟಕೋತ್ಸವವನ್ನು ಸಾಹಿತಿ ದಿವಂಗತ ಎಸ್. ಎಲ್. ಭೈರಪ್ಪ, ರಂಗಕರ್ಮಿಗಳಾದ ದಿವಂಗತ ಯಶವಂತ ಸರದೇಶಪಾಂಡೆ, ದಿವಂಗತ ರಾಜು ತಾಳಿಕೋಟಿ, ದಿವಂಗತ ಡಿ. ಹಣುಮಕ್ಕ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ದಿವಂಗತ ಅನ್ನಪೂರ್ಣ ಅಶೋಕ ಮಳಗಲಿ ಇವರುಗಳಿಗೆ ಅರ್ಪಿಸಲಾಯಿತು.




