ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೨೦೨೪ರ ಸಾರ್ವತ್ರಿಕ ಲೋಕಸಭಾ ಚುನಾವಣೆಯು ಮಾ. ೧೬ ರಂದು ಘೋಷಣೆಯಾಗಿದ್ದು, ಸಾರ್ವತ್ರಿಕ ಲೋಕಸಭಾ ಚುಣಾವಣೆ ನಿಮಿತ್ಯ ಜಿಲ್ಲೆಯಲ್ಲಿ ಈಗಾಗಲೇ ಕೈಗೊಳ್ಳಲಾದ ಎಲ್ಲ ಮುಂಜಾಗ್ರತಾ ಕ್ರಮಗಳ ಕೈಗೊಂಡಿದ್ದು ಸದರಿ ಚುನಾವಣೆಯು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಅಬಕಾರಿ ಇಲಾಖೆಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ದೃಷ್ಟಿಯಿಂದ ಬೆಳಗಾವಿ ದಕ್ಷಿಣ ಜಿಲ್ಲೆಯಲ್ಲಿನ ಮದ್ಯ ಮಾರಾಟ ಸನ್ನದುದಾರರಿಗೆ ಫ. ೨೦ ರಿಂದ ೨೧, ೨೦೨೪ ರಂದು ಸಭೆ ನಡೆಯಿಸಿ ಸಭೆಯಲ್ಲಿ ಸೂಚನೆಗಳನ್ನು ನೀಡಲಾಗಿದೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಅಥವಾ ಸನ್ನದು ಆವರಣದಲ್ಲಿ ಯಾವುದೇ ಅಚಾತುರ್ಯ ನಡೆಯುವಲ್ಲಿ ಸನ್ನದುದಾರರು ಅವಕಾಶ ನೀಡಿದಲ್ಲಿ ಸನ್ನದುಗಳು ಅಮಾನತ್ತು ಆದಲ್ಲಿ ಸನ್ನದುದಾರರೇ ನೇರವಾಗಿ ಜವಾಬ್ದಾರರಾಗಿರುತ್ತಾರೆ ಎಂದು ತಿಳಿಸಲಾಗಿರುತ್ತದೆ.
ಸಾರ್ವತ್ರಿಕ ಲೋಕಸಭಾ ಚುನಾವಣೆ-೨೦೨೪ರ ನಿಮಿತ್ಯ ಅಬಕಾರಿ ಇಲಾಖೆ ಬೆಳಗಾವಿ ಜಿಲ್ಲೆ (ದಕ್ಷಿಣ)ಗೆ ಸಂಬಂಧಿಸಿದಂತೆ ಈ ಕೆಳಕಂಡ ಸಂಚಾರಿ ದೂರವಾಣಿಗಳನ್ನು ಸಂಪರ್ಕಿಸಬಹುದಾಗಿದೆ.
ಬೆಳಗಾವಿ ಉಪ ವಿಭಾಗದ ಅಬಕಾರಿ ಉಪ ವಿಭಾಗ ೯೪೪೯೫೯೭೦೭೨, ಜಿಲ್ಲಾ ಮುಖ್ಯ ಕಂಟ್ರೋಲ್ ರೂಮ್ ೧೮೦೦೪೨೫೧೫೬೭, ರಾಮದುರ್ಗ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರು ೯೪೪೯೫೯೭೦೭೪, ೯೪೪೯೨೬೨೩೦೪, ಬೆಳಗಾವಿ ವಲಯ-೧ ಅಬಕಾರಿ ನಿರೀಕ್ಷಕರು ೯೦೨೨೧೫೦೮೪೫, ಬೆಳಗಾವಿ ವಲಯ- ೨ ಅಬಕಾರಿ ನಿರೀಕ್ಷಕರು ೯೫೩೫೭೬೫೨೦೧, ಬೆಳಗಾವಿ ವಲಯ-೩ ಅಬಕಾರಿ ನಿರೀಕ್ಷಕರು ೮೮೮೪೧೦೯೫೬೩, ಅಬಕಾರಿ ನಿರೀಕ್ಷಕರು ಖಾನಾಪೂರ ವಲಯ ೭೨೫೯೮೧೪೦೩೭, ಅಬಕಾರಿ ನಿರೀಕ್ಷಕರು ರಾಮದುರ್ಗ ವಲಯ ೯೭೪೦೮೨೭೩೩೨, ಅಬಕಾರಿ ನಿರೀಕ್ಷಕರು ಸವದತ್ತಿ ವಲಯ ೯೧೧೩೬೮೪೨೮೪, ಅಬಕಾರಿ ನಿರೀಕ್ಷಕರು ಬೈಲಹೊಂಗಲ ವಲಯ ೮೯೭೦೯೩೫೮೧೦ ಬೆಳಗಾವಿ ಜಿಲ್ಲೆ (ದಕ್ಷಿಣ) ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ