ಕೌಟುಂಬಿಕ ಸಂತೋಷವನ್ನು ತ್ಯಾಗ ಮಾಡಿ ದೇಶ ಕಾಯುವ ಸೈನಿಕರು – ಡಾ.ಸೋನಾಲಿ ಸರ್ನೋಬತ್ ಪ್ರಶಂಸೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರದ ಎಕ್ಸ್ ಆರ್ಮಿ ಮೆನ್ ಅಸೋಸಿಯೇಶನ್ ವಾರ್ಷಿಕ ದಿನಾಚರಣೆ ಮತ್ತು ಅರಿಸಿಣ – ಕುಂಕುಮ ಕಾರ್ಯಕ್ರಮದಲ್ಲಿ ನಿಯತಿ ಫೌಂಡೇಶನ್ ಚೇರಮನ್ ಮತ್ತು ಬಿಜೆಪಿ ಗ್ರಾಮೀಣ ಮೋರ್ಚಾದ ಖಾನಾಪುರ ಉಸ್ತುವಾರಿ ಡಾ ಸೋನಾಲಿ ಸರ್ನೋಬತ್ ಅವರು ಮುಖ್ಯ ಅತಿಥಿಯಾಗಿದ್ದರು.
ಇಂದಿನ ದಿನದಲ್ಲಿ ಮಹಿಳೆಯರ ಪ್ರಾಮುಖ್ಯತೆ ಮತ್ತು ಸಮಾಜಕ್ಕೆ ಅವರ ಕೊಡುಗೆಯ ಕುರಿತು ಸೋನಾಲಿ ಸರ್ನೋಬತ್ ಮಾತನಾಡಿದರು. ಸೈನಿಕರ ಪತ್ನಿಯರ ತ್ಯಾಗವನ್ನು ಪ್ರಶಂಸಿಸಿ, ಕೌಟುಂಬಿಕ ಸಂತೋಷಗಳನ್ನೆಲ್ಲ ತ್ಯಾಗ ಮಾಡಿ ಸೈನಿಕರು ದೇಶ ಕಾಯುತ್ತಾರೆ, ಪತ್ನಿಯರು ಅವರ ನೆನಪಿನಲ್ಲೇ ಜೀವನ ಕಳೆಯುತ್ತಾರೆ. ಇಂತವರು ನಿಜವಾಗಿಯೂ ನಮಗೆ ಆದರ್ಶ ಪ್ರಾಯ ಎಂದರು.
ಸೈನಿಕನು ದೇಶಕ್ಕಾಗಿ ಎಲ್ಲಾ ಸಾಮಾಜಿಕ ಮತ್ತು ಕೌಟುಂಬಿಕ ಸಂತೋಷಗಳನ್ನು ತ್ಯಾಗ ಮಾಡುತ್ತಾನೆ ಎಂದ ಅವರು, ಖಾನಾಪುರದ ಸೈನಿಕ ಭವನದ ಬೇಡಿಕೆಯ ಕುರಿತು ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಂಸ್ಕೃತಿ ಮತ್ತು ಪಾಕಪದ್ಧತಿ/ಅಡುಗೆ ಸಂಪ್ರದಾಯ ಸಂರಕ್ಷಣೆಯ ಕಡೆಗೆ ಮಹಿಳೆಯರ ಜವಾಬ್ದಾರಿಯನ್ನು ವಿವರಿಸಿದರು.
ಕಾರ್ಯಕ್ರಮದ ನಂತರ ಹಲ್ದಿಕುಂಕುಮ ನಡೆಯಿತು.
ಸಂಘದ ಅಧ್ಯಕ್ಷರಾದ ಅಮೃತ ಪಾಟೀಲ, ಗಣಪತ ಗಾವಡೆ ಸರ್, ನಾಗರಸೇವಿಕಾ ಮೇಘಾ ಕುಂದರಗಿ, ಮೀನಾಕ್ಸಿ ಬೈಲೂರಕರ, ಕಲ್ಪನಾ ಪಾಟೀಲ, ಮಾಜಿ ಸೈನಿಕರು ಮತ್ತು ಅವರ ಪತ್ನಿಯರು ಉಪಸ್ಥಿತರಿದ್ದರು.
ಖಾನಾಪುರದಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಪ್ರಯತ್ನ – ಡಾ.ಸೋನಾಲಿ ಸರ್ನೋಬತ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ