Belagavi NewsKannada NewsKarnataka NewsPolitics

*ಲಕ್ಕುಂಡಿಯಲ್ಲಿ ಇಂದಿನಿಂದ ಉತ್ಖನನ: ಪತ್ತೆಯಾಗುತ್ತಾ ಚಿನ್ನಾಭರಣ..?*

ಪ್ರಗತಿವಾಹಿನಿ ಸುದ್ದಿ: ದೇಶದ ಗಮನ ಸೇಳೆದಿರುವ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಇಂದಿನಿಂದ ಉತ್ಖನನ ನಡೆಯಲಿದೆ

ಕೋಟೆಯ ವೀರಭದ್ರೇಶ್ವರ ದೇವಸ್ಥಾನದ ಬಳಿ ಉತ್ಪನನಕ್ಕೆ ಪ್ಲಾನ್ ಮಾಡಲಾಗಿದೆ.  ಪ್ರವಾಸೋದ್ಯಮ ಇಲಾಖೆ, ಪುರಾತತ್ವ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಉತ್ಪನನ ನಡೆಯಲಿದೆ.

ಕಲ್ಯಾಣ ಚಾಲುಕ್ಯರ, ರಾಷ್ಟ್ರಕೂಟರ, ಹೊಯ್ಸಳರು, ಕಳಚೂರಿಗಳು, ವಿಜಯನಗರ ಅರಸರು, ದಾನಚಿಂತಾಮಣಿ ಅತ್ತಿಮಬ್ಬೆ ಆಳಿದ ಪ್ರದೇಶವಾದ ಇಲ್ಲ ಕಳೆದ ಕೆಲ ದಿನಗಳಿಂದ ನಿಧಿ ಪತ್ತೆಯಾಗುತ್ತಿರುವ ಬಗ್ಗೆ ಭಾರೀ ಸದ್ದು ಮಾಡುತ್ತಿದೆ. ಈ ಪ್ರದೇಶ ಸಾಕಷ್ಟು ಚಿನ್ನ, ಬೆಳ್ಳಿ ವಜ್ರ, ವೈಡೂರ್ಯಗಳ ಸಂಪತ್ತನ್ನು ತನ್ನೊಡಲೊಳಗೆ ಲೆಕ್ಕವಿಲ್ಲದಷ್ಟು ಹುದುಗಿಟ್ಟುಕೊಂಡಿದೆ ಎನ್ನಲಾಗಿದೆ.

ಲಕ್ಕುಂಡಿಯಲಿ ಈಗಾಗಲೇ 2024ರ ನವೆಂಬರ್ ತಿಂಗಳಿನಲ್ಲಿ ನಡೆದ ಅನ್ವೇಷಣೆಯಲ್ಲಿ ಸಾವಿರಾರು ಪ್ರಾಚೀನ ಅವಶೇಷಗಳು ಪತ್ತೆಯಾಗಿದ್ದವು. ಈಗ ನಿಧಿ ಪತ್ತೆಯಾಗಿದೆ. ಅನೇಕ ಭಾಗಗಳಲ್ಲಿ ನೀಲಮಣಿ, ಮುತ್ತು, ರತ್ನ, ಹವಳ, ವಜ್ರ, ವೈಡೂರ್ಯದಂತಹ ಅನೇಕ ವಸ್ತುಗಳು ಇಂದಿಗೂ ದೊರೆಯುತ್ತಿವೆ. ಆದ್ದರಿಂದ ಈ ಅವಶೇಷಗಳ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸುವಂತೆ ಮಾಡಿದೆ. ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಸರ್ಕಾರ ಅಂದಾಜು 5,388 ಚದರ ಅಡಿ ವ್ಯಾಪ್ತಿಯಲ್ಲಿ ಉತ್ಪನನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

Home add -Advt

2004-05ರಲ್ಲಿ ಲಕ್ಕುಂಡಿಯ ಪ್ರಭುದೇವರ ಮಠದ ದಕ್ಷಿಣ ಭಾಗದಲ್ಲಿ ಉತ್ಕನನ ನಡೆದಿತ್ತು. ಕಲ್ಯಾಣ ಚಾಲುಕ್ಯರ ಕಾಲದ ಅನೇಕ ಕುರುಹುಗಳು ಆಗ ಪತ್ತೆಯಾಗಿದ್ದವು. ಈಗ ಮತ್ತೆ ಉತ್ಪನನ ಅತೀ ಮಹತ್ವ ಪಡೆದುಕೊಳ್ಳಲಿದೆ. ಉತ್ಪನನ ವೇಳೆ ಇತಿಹಾಸಕ್ಕೆ ಸಂಬಂಧಿಸಿದ ಸ್ಮಾರಕಗಳು, ಶಾಸನಗಳು, ಶಿಲ್ಪಕಲೆಗಳು, ಆಭರಣಗಳು ದೊರೆಯುವ ಸಾಧ್ಯತೆಗಳಿವೆ.

Related Articles

Back to top button