Latest

ವಿಸ್ತರಣೆಯಾಗುತ್ತಾ ಸಂಚಾರ ನಿಯಮ ಉಲ್ಲಂಘನೆ ದಂಡ ರಿಯಾಯಿತಿ ಅವಧಿ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಘೋಷಿಸಿದ ದಂಡ ಪಾವತಿ ಮೇಲಿನ ಶೇ.50ರಷ್ಟು ರಿಯಾಯಿತಿ ಅವಧಿ ನಾಳೆ (ಫೆ.11) ಅಂತ್ಯವಾಗಲಿದೆ. ಆದರೆ ಈ ಆಫರ್ ಗೆ ಭಾರೀ ಪ್ರಮಾಣದ ಸ್ಪಂದನೆ ದೊರಕಿದ್ದರಿಂದ ರಿಯಾಯಿತಿ ದಿನಾಂಕ ವಿಸ್ತರಿಸುವಂತೆ ಪೊಲೀಸ್ ಇಲಾಖೆ ಸರಕಾರಕ್ಕೆ ಮನವಿ ಮಾಡಿದೆ.

ಶೇ.50 ರಿಯಾಯಿತಿ ಆದೇಶ ಜಾರಿಯಾದಾಗಿನಿಂದ ನಿನ್ನೆಯವರೆಗೆ  65.93 ಕೋಟಿ ರೂ. ದಂಡದ ಮೊತ್ತವನ್ನು ಸಂಚಾರ ಪೊಲೀಸ್ ಇಲಾಖೆ ಸಂಗ್ರಹಿಸಿದೆ. ಇದರೊಂದಿಗೆ 23.73 ಲಕ್ಷ ಪ್ರಕರಣಗಳು ವಿಲೇವಾರಿಯಾಗಿವೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Home add -Advt

ಇನ್ನೂ ಕೆಲ ಜನ ನಾನಾ ಕಾರಣಗಳಿಂದ ರಿಯಾಯಿತಿ ದಂಡ ಭರಿಸುವಲ್ಲಿ ಹಿಂದಿದ್ದಾರೆ. ಹೀಗಾಗಿ ಗರಿಷ್ಠ ಗುರಿ ಸಾಧಿಸುವ ನಿಟ್ಟಿನಲ್ಲಿ ಈ ಆಫರ್ ಅವಧಿಯನ್ನು ಫೆ. 11ರವರೆಗೆ    ವಿಸ್ತರಿಸುವಂತೆ ಬೆಂಗಳೂರು ಸಂಚಾರ ಪೊಲೀಸ್ ಹಿರಿಯ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸರ್ಕಾರ ಈ ಬಗ್ಗೆ ಸಕಾರಾತ್ಮಕ ನಿರ್ಧಾರ ತಳೆದಲ್ಲಿ ನಾನಾ ಅನಾನುಕೂಲಗಳಿಂದ ದಂಡ ಭರಿಸಲಾಗದವರಿಗೂ ಅವಕಾಶ ಲಭಿಸಿ ಇನ್ನಷ್ಟು ಮೊತ್ತ ಸಂಗ್ರಹವಾಗಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ವಿಶೇಷ ಆಯುಕ್ತ ಎಂ.ಎ. ಸಲೀಂ ತಿಳಿಸಿದ್ದಾರೆ.

ನಾಳೆಯವರೆಗೆ ಇರುವ ಅವಕಾಶ ಬಳಸಿಕೊಂಡು ಅನೇಕ ಜನ ಇನ್ನೂ ದಂಡದ ಮೊತ್ತ ಭರಿಸುತ್ತಲೇ ಇರುವ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಮಾಡಿದರೆ ಉತ್ತಮ ಎಂಬ ಅಭಿಪ್ರಾಯ ರಾಜ್ಯಾದ್ಯಂತ ಸಾರ್ವಜನಿಕ ವಲಯದಿಂದಲೂ ಕೇಳಿಬಂದಿದ್ದು ಸರಕಾರದ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿಸಿದೆ.

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕಿಚ್ಚ ಅಭಿಮಾನಿಗಳ ಅಸಮಾಧಾನದ ಕಿಚ್ಚು: ಲಘು ಲಾಠಿಚಾರ್ಜ್

https://pragati.taskdun.com/kiccha-fans-displeasure-at-valmiki-jayanti-event-light-lathicharge/

*ಸಚಿವ ನಿರಾಣಿ ಒಡೆತನದ ಕಾರ್ಖಾನೆ ಬಾಯ್ಲರ್ ದುರಂತ; ಓರ್ವ ಸಾವು; ನಾಲ್ವರ ಸ್ಥಿತಿ ಗಂಭೀರ*

https://pragati.taskdun.com/suger-factoryboiler-blastone-death4-injuerdbagalakote/

ಇಸ್ರೋದಿಂದ 3 ಉಪಗ್ರಹಗಳನ್ನು ಹೊತ್ತ ಹೊಸ ರಾಕೆಟ್ SSLV-D2 ಉಡಾವಣೆ

https://pragati.taskdun.com/isro-launches-new-rocket-sslv-d2-from-sriharikota/

Related Articles

Back to top button