ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಗಿಫ್ಟ್ ಕಳಿಸುವುದಾಗಿ ಭರವಸೆ ನೀಡಿದ್ದ ಸ್ನೇಹಿತ ಮಹಿಳೆಗೆ ಆನ್ ಲೈನ್ ಮೂಲಕ 14ಲಕ್ಷಕ್ಕೂ ಅಧಿಕ ವಂಚನೆ ಮಾಡಿರುವ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಫೇಸ್ ಬುಕ್ ನಲ್ಲಿ ಪರಿಚಯನಾಗಿದ್ದ ರಿಯಾನಾರ್ಡೊ ನೆಯಿಲ್ ಎಂಬ ವ್ಯಕ್ತಿ ಸ್ನೇಹಿತಗೆ ಮೊಬೈಲ್ ನಂಬರ್ ಪಡೆದು ಗಿಫ್ಟ್ ಕಳಿಸುವುದಾಗಿ ಹೇಳಿದ್ದ. ಆ.25ರಂದು ಮಹಿಳೆಗೆ ಕೊರಿಯರ್ ಆಫಿಸ್ ನಿಂದ ಕರೆ ಮಾಡಿ ಪಾರ್ಸಲ್ ಗಾಗಿ 32,800 ರೂ ಪಡೆದಿದ್ದರು. ನಂತರ ಮಹಿಳೆಗೆ ಕಸ್ಟಮ್ಸ್ ಅಧಿಕಾರಿ ಹೆಸರಲ್ಲಿ ಕರೆ ಮಾಡಿ ವಿವಿಧ ಶುಲ್ಕಗಳನ್ನು ಪಡೆದಿದ್ದಾರೆ. ಹೀಗೆ ಆನ್ ಲೈನ್ ಮೂಲಕ ವಂಚನೆಗೊಳಗಾದ ಮಹಿಳೆ 14.91 ಲಕ್ಷ ರೂ ಹಣವನ್ನು ಕಳೆದುಕೊಂಡಿದ್ದಾರೆ.
ವಂಚನೆಗೊಳಗಾಗುತ್ತಿದ್ದುದು ಗೊತ್ತಾಗುತ್ತಿದ್ದಂತೆಯೇ ಸಂತ್ರಸ್ತ ಮಹಿಳೆ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ