Kannada NewsKarnataka News

ಶೀಘ್ರ ರೋಗಪತ್ತೆ ಮಾಡಿದರೆ ಚಿಕಿತ್ಸೆಗೆ ಅನುಕೂಲ -ಡಾ. ಹರೀಶ ಮಲ್ಲಾಪೂರ ಮಹೇಶಪ್ಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ–  ಸಾಂಪ್ರದಾಯಿಕ ರೋಗ ಪತ್ತೆ ವಿಧಾನಗಳನ್ನು ಅನುಸರಿಸುವ ಬದಲು ಮುಂದುವರೆದ ಹಾಗೂ ಅತ್ಯಾಧುನಿಕ ರೀತಿಯನ್ನು ಅಳವಡಿಸಿಕೊಳ್ಳುವದರ ಮೂಲಕ ಶೀಘ್ರ ರೋಗಪತ್ತೆ ಮಾಡಿದರೆ ಚಿಕಿತ್ಸೆಗೆ ಅನುಕೂಲವಾಗುತ್ತದೆ. ಇದರಿಂದ ತೀವ್ರ ನಿಗಾ ಘಟಕದಲ್ಲಿನ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯ. ಆದ್ದರಿಂದ ಸಿಂಡ್ರೊಮಿಕ ತಪಾಸಣೆ ಈಗ ಅತ್ಯವಶ್ಯ ಎಂದು ಬೆಂಗಳೂರಿನ ನಾರಾಯಣ ಹೆಲ್ತ್‌ನ ತೀವ್ರ ನಿಗಾ ಘಟಕದ ತಜ್ಞವೈದ್ಯರಾದ ಡಾ. ಹರೀಶ ಮಲ್ಲಾಪೂರ ಮಹೇಶಪ್ಪ  ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ದಿ. ೨೦ ಅಕ್ಟೊಬರ ೨೦೨೧ರಂದು ಸಿಂಡ್ರೋಮ್ ರ‍್ಯಾಪಿಡ್ ಡಯಾಗ್ನೊಸ್ಟಿಕ್ ಟೆಸ್ಟ ಇನ್ ಐಸಿಯು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ತೀವ್ರ ನಿಗಾ ಘಟಕದಲ್ಲಿ ರೋಗಿಯನ್ನು ದಾಖಲಿಸಿದಾಗ ಕೆಲವೊಂದು ಸಂದರ್ಭದಲ್ಲಿ ರೋಗಿಯಯಲ್ಲಿ ಕಂಡುಬರುವ ಗುಣಲಕ್ಷಣಗಳ ಆಧಾರದ ಮೇಲೆ ರೋಗಪತ್ತೆ ಮಾಡಿದಾಗಲೂ ಕೂಡ ಸಾಂಪ್ರದಾಯಿಕವಾದ ತಪಾಸಣೆ ದೀರ್ಘಕಾಲ ಹಿಡಿಯುತ್ತದೆ. ಇದರಿಂದ ರೋಗಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬವಾಗಿ ಪ್ರಾಣಾಪಾಯಕ್ಕೆ ತೊಂದರೆಯಾಗಬಹುದು. ಆದ್ದರಿಂದ ಅತ್ಯಾಧುನಿಕವಾದ ಬಯೋಮಾರ್ಕರ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತೀವ್ರ ನಿಗಾ ಘಟಕದಲ್ಲಿದ್ದಾಗ ಶೀಘ್ರ ಚಿಕಿತ್ಸೆಯೊಂದಿಗೆ ರೋಗಪತ್ತೆ ವಿಧಾನವೂ ಅತ್ಯಂತ ಅವಶ್ಯವಾಗಿದೆ. ಇದು ಅತ್ಯಂತ ಸರಳವಾಗಿದ್ದು, ಕಡಿಮೆ ವೆಚ್ಚ ಮತ್ತು ಅವಧಿಯಲ್ಲಿ ಪರಿಣಾಮ ಲಭ್ಯ. ಅದರಲ್ಲಿಯೂ ಅಂಗಾಂಗ ಕಸಿ, ಬೋನ್ ಮ್ಯಾರೋ ಮಾಡುವ ಸಂದರ್ಭದಲ್ಲಿ ಈ ವಿಧಾನವು ಅತ್ಯಂತ ಸಹಕಾರಿಯಾಗಲಿದೆ. ಇದರಿಂದ ಆರ್ಥಿಕ ಸಮಸ್ಯಗೆ ಕಡಿವಾಣ ಹಾಕಬಹುದು. ಸಂಹವನ ಅತೀ ಮುಖ್ಯವಾಗಿದ್ದು, ರೋಗಿಯೊಂದಿಗಿನ ಸಮಾಲೋಚನೆ ಅವನಲ್ಲಿ ಉತ್ಸಾಹ ತುಂಬಬಹುದು ಎಂದು ತಿಳಿಸಿದರು.
ಈ ತಪಾಸಣೆಗಳಿಂದ ರೋಗಕ್ಕೆ ಸಂಬಂಧಿಸಿದ ಇನ್ನೀತರ, ಶಂಕಾಸ್ಪದವಲ್ಲದ ತೊಂದರೆ, ಸೋಂಕು ಸೇರಿದಂತೆ ವಿವಿಧ ರೀತಿಯ ಖಾಯಿಲೆಗಳನ್ನು ಕಂಡು ಹಿಡಿದು ಅದಕ್ಕೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. ಸಾಂಪ್ರದಾಯಿಕ ತಪಾಸಣೆಯಲ್ಲಿ ಬಹುವಿಧವಾಗಿದ್ದು, ಬಹಳ ಸಮಯ ತೆಗೆದುಕೊಳ್ಳುವದಲ್ಲದೇ, ಪ್ರತಿಯೊಂದು ಪರಿಣಾಮಕ್ಕೂ ಕಾಯಬೇಕಾಗುತ್ತದೆ. ಆದರೆ ಸಂಡ್ರೊಮಿಕ ತಪಾಸಣೆಯಲ್ಲಿ ಸಕಲವೂ ಒಂದರಲ್ಲಿಯೇ ಸಿಕ್ಕುಬಿಡುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಪ್ರಾಚಾರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ, ಡಾ. ಪ್ರೀತಿ ಮಾಸ್ತೆ, ಡಾ. ಜಿ ಎಸ್ ಗಾವಡೆ, ಡಾ. ಬಸವರಾಜ ಬಿಜ್ಜರಗಿ, ಡಾ. ರಾಜಶೇಖರ ಸೋಮನಟ್ಟಿ, ಡಾ. ಅನಿಲ ಮಲ್ಲೇಶಪ್ಪ, ಡಾ. ರಾಜೇಶ್ವರಿ, ಡಾ. ಸಂತೋಷ ಪಾಟೀಲ, ಡಾ. ಎಂ ಎಸ್ ಕರಿಶೆಟ್ಟಿ, ಡಾ ಜಯಪ್ರಕಾಶ ಅಪ್ಪಾಜಿಗೋಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಬೆಳಗಾವಿ ಬಳಿ ಗುಂಪು ಘರ್ಷಣೆ: ನಾಲ್ವರಿಗೆ ಗಂಭೀರ ಗಾಯ; ಉದ್ವಿಗ್ನ ವಾತಾವರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button