*ಎಸ್‌ಪಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ: ರಾಜ್ಯಸ್ಥಾನದಲ್ಲಿ ಆರೋಪಿ ವಶಕ್ಕೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ, ಗದಗ ಹಾಗೂ ಮಂಡ್ಯ ಎಸ್ ಪಿಗಳ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ವಂಚಿಸುತ್ತಿದ್ದ ಸೈಬರ್ ವಂಚಕನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಬೆಳಗಾವಿ ಎಸ್ ಪಿ ಅವರ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ, ವಂಚಿಸಲು ಆರೋಪಿ ಯತ್ನಿಸುತ್ತಿದ್ದ, ವಿಷಯ ತಿಳಿದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ದೂರು ನೀಡಿ ಆರೋಪಿಯ ಪತ್ತೆಗೆ ಬಲೆ ಬಿಸಿ ತನೆಖೆ ಕೈಗೊಂಡಾಗ ಗದಗ, ಮಂಡ್ಯ ಎಸ್ಪಿ ಗಳ ನಕಲಿ ಖಾತೆ ಜೊತೆಗೆ ಬೇರೆ ಬೇರೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ಸೃಷ್ಠಸಿ ವಂಚನೆಗೆ ಯತ್ನಿಸುತ್ತಿರುವುದು ತಿಳಿದು ಬಂದಿದೆ ಎಂದು ಬೆಳಗಾವಿ ಎಸ್ ಪಿ ಭೀಮಾ ಶಂಕರ ಗುಳೇದ ಅವರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಡುವುದಿಲ್ಲ. ಸರ್ಕಾರಿ ಸಂಬಳ ಪಡೆಯುವ ನಮಗೆ ಫೆಸ್ಟುಕ್ ಸ್ನೇಹಿತರ ಬಳಿ ಹಣ ಕೇಳುವ ಅವಶ್ಯಕತೆ ಬರುವುದಿಲ್ಲ. ಸಾರ್ವಜನಿಕರು ಈ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ಜೊತೆಗೆ ಸೈಬರ್ ವಂಚನೆ ಪ್ರಕರಣಗಳು ಕಂಡುಬಂದಿದ್ದೇ ಆದಲ್ಲಿ ತಕ್ಷಣ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದರು.
ಬಂಧಿತ ಆರೋಪಿ ಉತ್ತರ ಪ್ರದೇಶ ಮೂಲದ ವ್ಯಕ್ತಿಯೋರ್ವನ ಹೆಸರಿನಲ್ಲಿರುವ ಮೋಬೈಲ್ ನಂಬರ್ ಬಳಸಿಕೊಂಡು ಕೃತ್ಯ ಎಸಗಿದ್ದು ತೆನಿಖೆಯಿಂದ ತಿಳಿದುಬಂದಿದೆ. ಆತ ರಾಜ್ಯಸ್ಥಾನದಲ್ಲಿ ಇದ್ದು ಈ ಕೃತ್ಯ ಎಸಗುತ್ತಿದ್ದ, ಆತನನ್ನು ಬಂಧಿಸಲಾಗಿದೆ. ಇಂಥ ಸಂಗತಿಗಳಿಂದ ಎಚ್ಚರದಿಂದ ಇರಬೇಕು ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ಮನವಿ ಮಾಡಿದದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ