
ಪ್ರಗತಿವಾಹಿನಿ ಸುದ್ದಿ; ರಾಮದುರ್ಗ: ಕಟಕೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಗೀಡಾದ ಪಾಂಡಪ್ಪ ದುಂಡಪ್ಪ ಜಟಗನ್ನವರ ಅವರ ಪತ್ನಿ ಲಕ್ಷ್ಮೀ ಜಟಗನ್ನವರ (30) ಹಾಗೂ ರಮೇಶ ಬಡಿಗೇರ (36) ಬಂಧಿತ ಆರೋಪಿಗಳು.
ಭಾನುವಾರ ರಾತ್ರಿ ಪಾಂಡಪ್ಪನ ತಲೆಗೆ ಹೊಡೆದು ಕೊಲೆ ಮಾಡಿ, ಬಳಿಕ ರಸ್ತೆ ಅಪಘಾತದಂತೆ ಕಾಣುವ ಸಲುವಾಗಿ ಕಂಬಳಿಯಲ್ಲಿ ಸುತ್ತಿ ತಂದು ಬೈಕ್ ಸಮೇತ ರಸ್ತೆಯಲ್ಲಿ ಎಸೆದು ಹೋಗಿದ್ದರು. ಮೃತ ಪಾಂಡಪ್ಪ ಅವರ ತಂದೆ ದುಂಡಪ್ಪ ದೂರು ಕಟಕೋಳ ಠಾಣೆಗೆ ದೂರು ನೀಡಿದ್ದರು.
ಸಿಪಿಐ ಪಟ್ಟಣಶೆಟ್ಟಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಶಾಲೆಯ ಬಾವಿಗೆ ಹಾರಿ ವಿದ್ಯಾರ್ಥಿ ಆತ್ಮಹತ್ಯೆ
https://pragati.taskdun.com/latest/student-suicideschoolsirsi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ