ಪ್ರಗತಿವಾಹಿನಿ ಸುದ್ದಿ; ಮೈಸೂರು: ಕುಡುಕ ತಂದೆಯೊಬ್ಬ ಹೆತ್ತ ಮಕ್ಕಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಮಗಳನ್ನೇ ಸಾಯಿಸಿರುವ ಘಟನೆ ಮೈಸೂರು ಜಿಲ್ಲೆಯ ಉದ್ಬೂರು ತಾಲೂಲುಕಿನಲ್ಲಿ ನಡೆದಿದೆ.
ಸ್ವಾಮಿನಾಯಕ್ ಎಂಬ ವ್ಯಕ್ತಿ ನ.17ರಂದು ಕಂಠಪೂರ್ತಿ ಕುಡಿದು ಬಂದು ಮನೆಯಲ್ಲಿ ಪತ್ನಿ ಗೀತಾ ಜೊತೆ ಜಗಳವಾಡುತ್ತಿದ್ದ. ಪತ್ನಿ ಬೈದು ಬುದ್ಧಿವಾದ ಹೇಳಿದ್ದಕ್ಕೆ ತನ್ನ ಇಬ್ಬರು ಮಕ್ಕಳೊಂದಿಗೆ ಜಗಳ ಶುರುಮಾಡಿ, ಬಳಿಕ ಸುತ್ತಿಗೆಯಿಂದ ಮನಬಂದಂತೆ ಥಳಿಸಿದ್ದ. ಇಬ್ಬರು ಮಕ್ಕಳು 13 ವರ್ಷದ ಕುಸುಮಾ ಹಾಗೂ ಧನುಶ್ರೀ ಗಂಭೀರವಾಗಿ ಗಾಯಗೊಂಡಿದ್ದರು.
ಮಾರಣಾಂತಿಕವಾಗಿ ಮಕ್ಕಳ ಮೇಲೆ ಹಲ್ಲೆ ನಡೆಸಿ ತಂದೆ ಸ್ವಾಮಿನಾಯಕ್ ಪರಾರಿಯಾಗಿದ್ದಾನೆ. ಇಬ್ಬರು ಮಕ್ಕಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಗಳು ಕುಸುಮಾ ಕೊನೆಯುಸಿರೆಳೆದಿದ್ದಾಳೆ. ಇನ್ನೋರ್ವ ಪುತ್ರಿ ಧನ್ಯಶ್ರೀ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
ಆರೋಗ್ಯ ಸಚಿವ ಡಾ.ಸುಧಾಕರ್ ಗೆ ಸಮನ್ಸ್; ಕೋರ್ಟ್ ಆದೇಶ
https://pragati.taskdun.com/minister-sudhakarsummoncecourt-order/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ