ಕ್ರೀಸ್ ವೈಸ್ ಸಿಬ್ಬಂದಿಯಿಂದ ಪ್ರವಾಹ ಸಂತ್ರಸ್ತರಿಗೆ ನೆರವು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಭೀಕರ ಪ್ರವಾಹಕ್ಕೆ ಕರಗದವರಿಲ್ಲ. ಎಲ್ಲ ವರ್ಗದ ಜನರೂ ತಮ್ಮ ಕೈಲಾದಷ್ಟು ನೆರವು ನೀಡುತ್ತಿದ್ದಾರೆ.
ಇದಕ್ಕೊಂದು ತಾಜಾ ಉದಾಹರಣೆ ಬೆಳಗಾವಿಯ ಕ್ರೀಸ್ ವೈಸ್ ಟೈಲರ್ ಕಾರ್ಮಿಕ ಸಿಬ್ಬಂದಿ. ಇಲ್ಲಿಯ ಕಾರ್ಮಿಕರೆಲ್ಲ ಸೇರಿ ಸುಮಾರು 71 ಸಾವಿರ ರೂ. ಹಣ ಸಂಗ್ರಹಿಸಿ ಆರ್ ಎಸ್ಎಸ್ ಪ್ರವಾಹ ಸಂತ್ರಸ್ತ ನಿಧಿಗೆ ದೇಣಿಗೆ ನೀಡಿದ್ದಾರೆ.
ಕ್ರೀಸ್ ವೈಸ್ ಮಾಲೀಕರಾದ ಕೃಷ್ಣ ಭಟ್, ಪಂಕಜಾ ಭಟ್, ಅವರ ಕಾರ್ಮಿಕ ಸಿಬ್ಬಂದಿ ಮತ್ತು ವಿಶ್ವ ಹಿಂದು ಪರಿಷದ್ ಜಿಲ್ಲಾ ಅಧ್ಯಕ್ಷ ಶ್ರೀಕಾಂತ್ ಕದಮ್, ನ್ಯಾಯವಾದಿ ಜಯಶ್ರೀ ಮಂಡೊಲಿ, ಸಾಧನಾ ಮತ್ತು ಪ್ರದೀಪ್ ಹೆಗ್ಡೆ ಇವರೆಲ್ಲರೂ ಸೇರಿ ಧನ ಸಹಾಯ ಮಾಡಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸೇವಾ ವಿಭಾಗಕ್ಕೆ ಅಶೋಕ್ ಶಿಂತ್ರೆ, ಸತೀಶ್ ಮಾಳ್ವದೆ, ಬಸವರಾಜ್ ಹಳಿಂಗಳಿ ಸಹಾಯ ಧನವನ್ನು ಸ್ವೀಕರಿಸಿದರು. ಇವರ ಕಾರ್ಯಕ್ಕೆ ಅಶೋಕ್ ಶಿಂತ್ರೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜದ ಪ್ರತಿಯೊಬ್ಬರೂ ತಮ್ಮಿಂದ ಸಾಧ್ಯವಾದ ಸಹಾಯವನ್ನು ಮಾಡಬೇಕು. ಕ್ರೀಸ್ ವೈಸ್ ಸಿಬ್ಬಂದಿ ಆದರ್ಶವನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಕಷ್ಟದಲ್ಲಿದ್ದ ನೆರೆ ಸಂತ್ರಸ್ತರಿಗೆ ನಿಜವಾಗಿ ಸಹಾಯ ಮಾಡಿದ ಸಂತೃಪ್ತಿ ಇರುತ್ತದೆ. ಸಮಾಜವು ಸಹಾಯ ಮಾಡಿದವರನ್ನು ಎಂದೂ ಮರೆವುದಿಲ್ಲ ಎಂದು ಅವರು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ