
ಪ್ರಗತಿವಾಹಿನಿ ಸುದ್ದಿ: ಕಲುಷಿತ ನೀರು ಸೇವಿಸಿ ಒಂದೆ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದ ವೀರಪಲ್ಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗಂಗಮ್ಮ (70), ಮುನಿನಾರಾಯಣಮ್ಮ (74), ಲಕ್ಷ್ಮಮ್ಮ (70). ನರಸಿಂಹಪ್ಪ (75) ಮೃತ ಪಟ್ಟವರು. ವೀರಾಪುರ ಗ್ರಾಮದಲ್ಲಿಯೂ ಕಲುಷಿತ ನೀರು ಸೇವಿಸಿ ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೀರಾಪುರ ಗ್ರಾಮದ ವರಲಕ್ಷ್ಮಿ ಲಕ್ಷ್ಮೀದೇವಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮ ಪಂಚಾಯ್ತಿ ವತಿಯಿಂದ ಪೂರೈಸಿದ್ದ ನೀರು ಕಲುಷಿತ ಗೊಂಡಿದ್ದ ಕಾರಣ ಜನರಲ್ಲಿ ವಾಂತಿ ಕಾಣಿಸಿಕೊಂಡಿದೆ. ನೀರು ಸರಬರಾಜು ಮಾಡಿರುವ ಕೋಟಗಲ್ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ಸಿಟ್ಟಿಗೆದ್ದಿದ್ದು, ಒಂದೇ ವಾರದಲ್ಲಿ ಗ್ರಾಮದಲ್ಲಿ ನಾಲ್ಕು ಸರಣಿ ಸಾವಾದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ