Belagavi NewsBelgaum NewsKannada NewsKarnataka NewsNationalPolitics

*ನಾಲ್ಕು ಅಂತಸ್ತಿನ ಮನೆ ಕುಸಿದು 6 ಜನ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಭಾನುವಾರ ರಾತ್ರಿ ಮುಂಬೈ ನಗರದ ಮಂಖುರ್ದ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ವಸತಿ ಗೃಹ ಕುಸಿದು ಬಿದ್ದು ಮಕ್ಕಳು ಸೇರಿದಂತೆ ಆರು ಜನ  ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಂಖುರ್ದ್‌ನ ಜನತಾ ನಗರದಲ್ಲಿರುವ ಹನುಮಾನ್ ಮಂದಿರದ ಹಿಂಭಾಗದ 5ನೇ ನಂಬರ್ ಚಾಲ್‌ನಲ್ಲಿ ರಾತ್ರಿ ಸುಮಾರು 8:30ರ ವೇಳೆಗೆ ಈ ಘಟನೆ ನಡೆದಿದೆ. ನೆಲಮಹಡಿ ಸೇರಿದಂತೆ ಒಟ್ಟು ನಾಲ್ಕು ಅಂತಸ್ತು ಹೊಂದಿದ್ದ ಈ ಕಟ್ಟಡದ ಕೆಲವು ವಸತಿ ಮನೆಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದಿವೆ. ಇದರ ಪರಿಣಾಮವಾಗಿ ಕಟ್ಟಡದಲ್ಲಿದ್ದ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.

Home add -Advt

ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಮುಂಬೈ ಅಗ್ನಿಶಾಮಕ ದಳ, ಮುಂಬೈ ಪೊಲೀಸರು ಹಾಗೂ ಬೃಹನ್ಮುಂಬೈ ಮಹಾನಗರ ಪಾಲಿಕೆ  ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ.

ಅವಶೇಷಗಳ ಅಡಿ ಸಿಲುಕಿದ್ದವರನ್ನು ಹೊರತೆಗೆಯಲು ತೀವ್ರ ಶ್ರಮ ವಹಿಸಲಾಯಿತು. ಆಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ರಕ್ಷಣೆ ಪ್ರಕ್ರಿಯೆ ಚುರುಕಾಗಿ ಸಾಗಿದೆ.

Related Articles

Back to top button