*ಗಾಂಜಾ, ಮಟ್ಕಾ ಕೇಸ್: ಇಬ್ಬರನ್ನು ಬಂಧಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಪೊಲೀಸರು ಗಾಂಜಾ ಸೇವಿಸುತ್ತಿದ್ದ ಹಾಗೂ ಮಟಕಾ ಆಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ
ಮಾಳಮಾರುತಿ ಠಾಣೆ ಪೊಲೀಸ್‌ರಿಂದ ಗಾಂಜಾ ಸೇವಿಸುತ್ತಿದ್ದ ವ್ಯಕ್ತಿಗಳ ಬಂಧನ
ನ.13 ರಂದು ಆನಂದ ಮಾರುತಿ ನಾಯಿಕ (36) ಎಂಬ ಆರೋಪಿ ಬೆಳಗಾವಿಯ ರುಕ್ಮಿಣಿ ನಗರ 5ನೇ ಕ್ರಾಸ್‌ನ ಸಾರ್ವಜನಿಕ ಸ್ಥಳದಲ್ಲಿ ಅಸಹಜವಾಗಿ ವರ್ತಿಸುತ್ತಿದ್ದ ಬಗ್ಗೆ ಕಂಡು ಬಂದಾಗ ವಿಚಾರಣೆ ಮಾಡಿದಾಗ ಆತ ಮಾದಕ ಪದಾರ್ಥ ಸೇವನೆ ಮಾಡಿ ವರ್ತಿಸುತ್ತಿರುವಂತೆ ಕಂಡು ಬಂದಿದೆ. ಇಒ ವೇಳೆ ಪೊಲೀಸರು ಆರೋಪಿತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ಗಾಂಜಾ ಸೇವನೆ ಮಾಡಿರುವುದು ಕಂಡು ಬಂದಿದೆ.
ಆರೋಪಿ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ.214/2025 ಕಲಂ.27(b) ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.
ಹಿರೇಬಾಗೇವಾಡಿ ಠಾಣೆ ಪೊಲೀಸ್‌ರಿಂದ ಮಟಕಾ ಆಡುವವರ ಮೇಲೆ ದಾಳಿ
ನ.13 ರಂದು ಉಳವೇಶ ಮಡಿವಾಳಿ ಕುರಬರ (23) ಎಂಬ ಆರೋಪಿ ಹಿರೇಬಾಗೇವಾಡಿ-ಬಸ್ಸಾಪೂರ ರಸ್ತೆಯ ಬದಿಗೆ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗ ಓ.ಸಿ ಅಂಕಿ ಸಂಖ್ಯೆಗಳ ಮೇಲೆ ಹಣ ಹಚ್ಚಿ ಕಲ್ಯಾಣ ಮಂಬೈ /ಮಟಕಾ ಎಂಬ ಜುಗಾರ ಆಟ ಆಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ದಾಳಿಯಲ್ಲಿ ಆರೋಪಿಯಿಂದ ರೂ.820/ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಚೀಟಿಗಳನ್ನು ವಶಕ್ಕೆ ಪಡೆಯಲಾಗಿದೆ.
ಈತ ತಾನು ಸಂಗ್ರಹಿಸಿದ ಹಣವನ್ನು ಇನ್ನೋರ್ವ ಆರೋಪಿ ಜಹೀರುದ್ದಿನ ಇಮಾಮಸಾಬ ನೇಸರಗಿ ಬಾಗೆವಾಡಿ ಈತನಿಗೆ ನೀಡುವುದಾಗಿ ತಿಳಿಸಿದ್ದು, ಇಬ್ಬರೂ ಆರೋಪಿಗಳ ವಿರುದ್ಧ ಹಿರೇಬಾಗೇವಾಡಿ ಪೊಲೀಸ್ ಠಾಣೆ ಪ್ರಕರಣ ಸಂಖ್ಯೆ.185/2025 ಕಲಂ.78(iii) ಕೆ. ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ನಂ. 2 ಈತನನ್ನು ಪತ್ತೆಹಚ್ಚುವ ಕಾರ್ಯ ಮುಂದುವರೆಸಲಾಗಿದೆ.




