Kannada NewsKarnataka News

*ಜೈ ಶ್ರೀರಾಮ ಘೋಷಣೆ ಕೂಗಿದ್ದಕ್ಕೆ ವಿದ್ಯಾರ್ಥಿಗಳ ನಡುವೆ ಮಾರಾಮಾರಿ*

ಪ್ರಗತಿವಾಹಿನಿ ಸುದ್ದಿ: ಕಾಲೇಜಿನಲ್ಲಿ ಆಯೋಜನೆ ಮಾಡಲಾಗಿದ್ದ ಯುವಜನೋತ್ಸವದ ಅಂಗವಾಗಿ ನಾಟಕದ ತಾಲೀಮು ಮಾಡುವಾಗ “ಜೈ ಶ್ರೀರಾಮ” ಘೋಷಣೆ ಕೂಗಿದ್ದಕ್ಕೆ ಮಾತಿಗೆ ಮಾತು ಬೆಳೆದು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಕ್ಯಾಂಪಸ್‌ನಲ್ಲಿ ದೊಡ್ಡ ಜಗಳವೇ ನಡೆದಿದೆ.

Home add -Advt

ಬೀದರ್ ನಗರದ ಹೊರವಲಯದ ಮೈಲೂರಿನಲ್ಲಿರುವ ಗುರುನಾನಕ್ ದೇವ್ ಪದವಿ ಕಾಲೇಜಿನಲ್ಲಿ ಬುಧವಾರ ಎರಡು ಸಮುದಾಯದ ವಿದ್ಯಾರ್ಥಿಗಳ ನಡುವೆ ಜಗಳವಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.‌ ಕಾಲೇಜಿನಲ್ಲಿ ಮೇ 31 ರಂದು ಯುವಜನೋತ್ಸವ ಆಯೋಜಿಸಲು ಉದ್ದೇಶಿಸಿದ್ದು, ಅದರ ಸಿದ್ಧತೆಗಾಗಿ ವಿದ್ಯಾರ್ಥಿಗಳು ತಾಲಿಮು ಏರ್ಪಡಿಸಿದ್ದರು. ನಾಟಕ ತಾಲಿಮು ನಡೆಸುತ್ತಿದ್ದಾಗ ಇಬ್ಬರು ವಿದ್ಯಾರ್ಥಿಗಳು ನಾಟಕದ ಭಾಗವಾಗಿದ್ದ ‘ಜೈ ಶ್ರೀರಾಮ್’ ಘೋಷಣೆ ಕೂಗಿದರು. ಇದಕ್ಕೆ ಇನ್ನೊಂದು ಸಮುದಾಯದ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಆ ಸಮುದಾಯದ ಇಬ್ಬರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡೂ ಸಮುದಾಯದ ವಿದ್ಯಾರ್ಥಿಗಳ ನಡುವೆ ಕ್ಯಾಂಪಸ್‌ನಲ್ಲಿ ದೊಡ್ಡ ಜಗಳವೇ ನಡೆದಿದೆ.

ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಜಗಳವಾಡುತ್ತಿದ್ದ ಗುಂಪನ್ನು ಶಮನಗೊಳಿಸಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ, ದೂರು ನೀಡಲಾಗಿದೆ.‌ ಇನ್ನೂ ಮೇ 31 ರಂದು ನಡೆಯಬೇಕಿದ್ದ ಯೂತ್ ಫೆಸ್ಟ್ ಅನ್ನು ಕಾಲೇಜು ಆಡಳಿತ ಮಂಡಳಿ ರದ್ದುಗೊಳಿಸಿದೆ ಎಂದು ತಿಳಿದು ಬಂದಿದೆ.‌

Related Articles

Back to top button