Latest

*ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ*

ಪ್ರಗತಿವಾಹಿನಿ ಸುದ್ದಿ: ಹತ್ತು ವರ್ಷದ ಬಾಲಕಿಗೆ ಚಾಕೊಲೇಟ್ ಕೊಡಿಸುವುದಾಗಿ ನಂಬಿಸಿ ಕರೆದೊಯ್ದು ಕಾಮುಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Home add -Advt

ಬಿಹಾರ ಮೂಲದ ರಾಜೇಶ್ ಗುಪ್ತಾ ಈ ಕೃತ್ಯವೆಸಗಿದ್ದಾನೆ. ಹೆಬ್ಬಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದೆ.

ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದ ಆರೋಪಿ ರಾಜೇಶ್ ನಾಗೇನಹಳ್ಳಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಡುತ್ತಿದ್ದ. ನೇಪಾಳ ಮೂಲದ ಬಾಲಕಿಯ ಪೋಷಕರು ನಾಗೇನಹಳ್ಳಿ ಬಳಿ ಅಪಾರ್ಟ್ ಮೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಬಾಲಕಿಗೆ ಚಾಕಲೇಟ್ ಕೊಡಿಸುತ್ತೇನೆ ಎಂದು ಕರೆದೊಯ್ದ ದುರುಳ ಅತ್ಯಾಚಾರವೆಸಗಿದ್ದಾನೆ. ಮನೆಗೆ ಬಂದ ಬಾಲಕಿ ತನ್ನೊಂದಿಗೆ ಆರೋಪಿ ನಡೆದುಕೊಂಡ ರೀತಿ ಬಗ್ಗೆ ಹೇಳಿದ್ದಾಳೆ. ತಕ್ಷಣ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Back to top button