Kannada NewsKarnataka News

*ಕುಮಟಾ ಬಳಿ ಮುಳುಗಿದ 40 ಪ್ರವಾಸಿಗರನ್ನು ಹೊತ್ತೋಯ್ದ ಬೋಟ್*

ಪ್ರಗತಿವಾಹಿನಿ ಸುದ್ದಿ: ಬೋಟ್‌ನಲ್ಲಿ ಮಿತಿಗಿಂತ ಹೆಚ್ಚಿನ ಪ್ರವಾಸಿಗರನ್ನು ತುಂಬಿ ಪ್ರಯಾಣ ಬೆಳೆಸಿದ ಕಾರಣ ಬೋಟ್ ಮುಳುಗಡೆ ಆಗಿರುವ ಘಟೆನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ನಡೆದಿದೆ.‌

Home add -Advt

ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದರು. ಈ ವೇಳೆ ಪ್ರವಾಸಿಗರನ್ನು ಹೊತ್ತೋಯ್ದ ಬೋಟ್ ಮುಳುಗಡೆಯಾಗಿ, ಬೋಟ್‌ನಲ್ಲಿದ್ದ ಘಟನೆಯಲ್ಲಿ ಬೋಟಿನಲ್ಲಿದ್ದ 40ಮಂದಿ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬೋಟ್ ಮುಡಂಗಿಯ ಗಣೇಶ್ ಎಂಬುವವರಿಗೆ ಸೇರಿದ್ದಾಗಿದೆ. 

ಘಟನೆ ನಡೆಯುತ್ತಿದ್ದಂತೆ ಕರಾವಳಿ ಕಾವಲು ಪಡೆ ಸಿಬ್ಬಂದಿ ಮತ್ತು ಸ್ಥಳೀಯ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಎಲ್ಲರನ್ನು ರಕ್ಷಣೆ ಮಾಡಿದ್ದಾರೆ. ಗೋಕರ್ಣ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button