Kannada NewsLatestNational

*14 ವರ್ಷದ ಮಗಳನ್ನು 2 ಲಕ್ಷಕ್ಕೆ 52 ವರ್ಷ ವ್ಯಕ್ತಿಗೆ ಮಾರಿದ ತಂದೆ-ತಾಯಿ*

ಪ್ರಗತಿವಾಹಿನಿ ಸುದ್ದಿ: ಹಣದ ಆಸೆಗಾಗಿ ಸ್ವಂತ ಮಗಳನ್ನೇ ತಂದೆ-ತಾಯಿ ಸೇರಿ ವಯಸ್ಸಾದ ವ್ಯಕ್ತಿಗೆ ಮಾರಾಟ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.‌

ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯಲ್ಲಿ  ತಂದೆ ತಾಯಿ ತನ್ನ ಅಪ್ರಾಪ್ತ ವಯಸ್ಸಿನ ಮಗಳನ್ನು ಕೇವಲ ಎರಡು ಲಕ್ಷ ರೂಪಾಯಿಗಾಗಿ 54 ವರ್ಷದ ವ್ಯಕ್ತಿಗೆ ಮದುವೆ ಹೆಸರಿನಲ್ಲಿ ಮಾರಾಟ ಮಾಡಿ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾರೆ.

ರಾಮರಾಜು ಹಾಗೂ ಶೋಭಾ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆದರೆ, ತಾಯಿ ಶೋಭಾ ತನ್ನ ಹಿರಿಯ ಮಗಳನ್ನು ಹಣದ ಆಸೆಗೆ ಮಾರಿದ್ದಾಳೆ. ಪುಂಗನೂರಿನ ಟಿಡ್ಕೊ ಮನೆಗಳಲ್ಲಿ ವಾಸಿಸುವ ಶೋಭಾ, ರೆಡ್ಡೆಪ್ಪ ಎಂಬ ಮಧ್ಯವರ್ತಿಯ ಮೂಲಕ ತನ್ನ ಮಗಳನ್ನು ಮಾರಾಟ ಮಾಡಿದ್ದಳು

ಕರ್ನಾಟಕದ ಕೋಲಾರ ಜಿಲ್ಲೆಯ ರಾಯಲ್ಪಡುವಿನ 54 ವರ್ಷದ ರಾಜಶೇಖರ್ ರೆಡ್ಡಿ ಎರಡನೇ ಮದುವೆಯಾಗಲು ಪ್ರಯತ್ನಿಸುತ್ತಿದ್ದ ವಿಷಯ ತಿಳಿದ ಆಕೆ ರೆಡ್ಡಪ್ಪ ಮೂಲಕ 2 ಲಕ್ಷ ರೂ.ಗೆ ಒಪ್ಪಂದ ಕುದುರಿಸಿದ್ದಳು. 2 ಲಕ್ಷ ಕೊಟ್ಟು ಆ ಬಾಲಕಿಯನ್ನು ರಾಜಶೇಖರ್ ಎರಡನೇ ಮದುವೆಯಾಗಿದ್ದಾರೆ.

Home add -Advt

ಒಪ್ಪಂದದ ಪ್ರಕಾರ ಶೋಭಾಗೆ ಹಣ ನೀಡಿ 10 ದಿನಗಳ ಹಿಂದೆ ಬೆಂಗಳೂರಿನಲ್ಲಿ ಆ ಹುಡುಗಿಯನ್ನು ಮದುವೆಯಾದ ರಾಜಶೇಖರ್ ಆಕೆಯನ್ನು ತನ್ನೊಂದಿಗೆ ಕರೆದುಕೊಂಡು ಹೋದರು. ನಂತರ, ರಾಜಶೇಖರ್ ಅಪ್ರಾಪ್ತ ಬಾಲಕಿಯನ್ನು ಚಿತ್ರಹಿಂಸೆ ನೀಡಿದ್ದು, ಆಕೆಗೆ ಅದು ಸಹಿಸಲಾಗಲಿಲ್ಲ. ಇದರ ಪರಿಣಾಮವಾಗಿ, ಆ ಹುಡುಗಿ ತನ್ನ ಅಣ್ಣನಿಗೆ ಫೋನ್ ಮೂಲಕ ಮಾಹಿತಿ ನೀಡಿದಳು. ನಂತರ, ತನ್ನ ಅಣ್ಣನ ಸಹಾಯದಿಂದ ಅವಳು ಪುಂಗನೂರನ್ನು ತಲುಪಿದಳು. ಬಳಿಕ ಈ ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಲಾಯಿತು.

ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸರು ದಾಳಿ ನಡೆಸಿ ಮಗುವನ್ನು ರಕ್ಷಿಸಿದ್ದಾರೆ. ಇದು ಕೇವಲ ಬಾಲ್ಯ ವಿವಾಹದ ಪ್ರಕರಣವಲ್ಲ, ಬದಲಿಗೆ ಇದು ಮಾನವ ಮಾರಾಟ ಮತ್ತು ಪೋಕ್ಸೋ ಕಾಯಿದೆಯಡಿ ಬರುವ ಗಂಭೀರ ಅಪರಾಧವಾಗಿದೆ. ಹಾಗಾಗಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related Articles

Back to top button