Kannada NewsKarnataka NewsLatest

ಬಾವಿಯಲ್ಲಿ ಜಲಯೋಗ ಪ್ರದರ್ಶಿಸಿ ಗಮನ ಸೆಳೆದ ಗ್ರಾಪಂ ಸದಸ್ಯ

ಪ್ರಗತಿವಾಹಿನಿ ಸುದ್ದಿ, ಕಲಬುರ್ಗಿ: ಜು.21 ಎಲ್ಲೆಡೆ ಯೋಗ ಸಂಭ್ರಮ ನಡೆದಿದ್ದು ಜಿಲ್ಲೆಯ ನಂದಿಕೂರು ಗ್ರಾಮ ಪಂಚಾಯಿತಿ ಸದಸ್ಯ ಪವನ್ ಕುಮಾರ ವಳಕೇರಿ ಜಲಯೋಗ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ನಂದಿಕೂರು ಗ್ರಾಮದ ಮಲ್ಲೇಶಪ್ಪ ಎಂಬುವರ ತೋಟದಲ್ಲಿರುವ ಬೃಹತ್ ಬಾವಿಯಲ್ಲಿ ಸತತ ಎರಡು ತಾಸುಗಳಿಗೂ ಅಧಿಕ ಕಾಲ ಜಲಯೋಗಾಸನ ಮಾಡಿದ ಅವರು, ಮತ್ಸ್ಯಾಸನ, ಪದ್ಮಾಸನ, ಪರ್ವತಾಸನ, ಸುಪ್ತ ವಜ್ರಾಸನ, ಉತ್ಕಟಾಸನ ಸೇರಿದಂತೆ ಹಲವು ಆಸನಗಳನ್ನು ಮಾಡಿದರು.

ಪವನಕುಮಾರ್ ವಳಕೇರಿ ಅವರು ಕಳೆದ ಹಲವು ವರ್ಷಗಳಿಂದ ಬಾವಿಯಲ್ಲಿ ನಿತ್ಯ ಜಲಯೋಗಾಸನ ಅಭ್ಯಾಸ ಮಾಡುತ್ತಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button