Kannada NewsKarnataka News

ಮೊಮ್ಮಗನ ಸ್ನೇಹಿತನಿಂದಲೇ ಅಜ್ಜನ ಮರ್ಡರ್

ಲಕ್ಕೇಬೈಲ ಗ್ರಾಮದಲ್ಲಿ ವೃದ್ಧ ವ್ಯಕ್ತಿ ಕೊಲೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ:  ಕ್ಷುಲ್ಲಕ ಕಾರಣಕ್ಕೆ ಅಜ್ಜನೊಬ್ಬ ತನ್ನ ಮೊಮ್ಮಗನ ಸ್ನೇಹಿತನಿಂದಲೇ ಕೊಲ್ಲಲ್ಪಟ್ಟಿದ್ದಾನೆ.

ತನ್ನ ಮೊಮ್ಮಗನ ಜೊತೆ ಜಳಗವಾಡಿದ್ದೇಕೆ ಎಂದು ಪ್ರಶ್ನಿಸಲು ಹೋಗಿದ್ದ ಅಜ್ಜನ
ಮೇಲೆ ಮೊಮ್ಮಗನ ಸ್ನೇಹಿತ ಹಲ್ಲೆ ನಡೆಸಿದ ಪರಿಣಾಮ ಅಜ್ಜ ಮೃತಪಟ್ಟ ಘಟನೆ ತಾಲ್ಲೂಕಿನ
ಲಕ್ಕೇಬೈಲ ಗ್ರಾಮದಲ್ಲಿ ಭಾನುವಾರ ನಡೆದಿದೆ.

Home add -Advt

ಕ್ಷುಲ್ಲಕ ಕಾರಣಕ್ಕಾಗಿ ನಡೆದ ಈ ಘಟನೆಯಲ್ಲಿ ಗ್ರಾಮದ ಕಲ್ಲಪ್ಪ ಗಂಗಿರಕರ (70) ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅದೇ ಗ್ರಾಮದ ಪ್ರಕಾಶ ಚಲವಾದಿ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲ್ಲಪ್ಪ ಅವರ ಮೊಮ್ಮಗ ಮತ್ತು ಆರೋಪಿ ಪ್ರಕಾಶ ನಡುವೆ ಇತ್ತೀಚೆಗೆ ಸಣ್ಣ ಜಗಳ
ನಡೆದಿದ್ದರಿಂದ ಇದನ್ನು ಪ್ರಶ್ನಿಸಲು ಹೋದ ಕಲ್ಲಪ್ಪ ಅವರ ಮೇಲೆ ಹಲ್ಲೆ ನಡೆಸಿದ
ಪ್ರಕಾಶ ಚಲವಾದಿ ಕಲ್ಲಪ್ಪ ಅವರ ತಲೆಗೆ ಬಲವಾಗಿ ಹೊಡೆದಿದ್ದು, ಇದರಿಂದ ಅವರು ಕುಸಿದುಬಿದ್ದು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಿಸಿದಂತೆ ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button