Kannada NewsKarnataka NewsLatest

ಮತ್ತೆ ಶಾಸಕ ಅಭಯ ಪಾಟೀಲ್ ಮಧ್ಯರಾತ್ರಿ ಕಾರ್ಯಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕಳೆದ ಫೆ.25ರಂದು ಪಕ್ಷದ ರಾಜ್ಯ ಅಧ್ಯಕ್ಷರ ಬೆಳಗಾವಿ ಭೇಟಿ ವೇಳೆ ಮಧ್ಯರಾತ್ರಿ ರಸ್ತೆಗಿಳಿದು ಪಕ್ಷದ ಬಂಟಿಂಗ್ಸ್, ಬ್ಯಾನರ್, ಪೋಸ್ಟರ್ ಗಳನ್ನು ಸ್ವತಃ ಅಂಟಿಸಿ ಸುದ್ದಿ ಮಾಡಿದ್ದ ಶಾಸಕ ಅಭಯ ಪಾಟೀಲ, ಈಗ ಮತ್ತೊಮ್ಮೆ ರಾತ್ರಿ ಕಾರ್ಯಾಚರಣೆ ಮಾಡಿ ಸುದ್ದಿಯಾಗಿದ್ದಾರೆ.

ಶನಿವಾರ ಮಧ್ಯರಾತ್ರಿ ( ಭಾನುವಾರ ಬೆಳಗಿನಜಾವ) 1 ಗಂಟೆಗೆ ಶಾಸಕ ಅಭಯ ಪಾಟೀಲ ಹಠಾತ್ ಎಸ್ ಪಿಎಂ ರಸ್ತೆಗೆ ಧಾವಿಸಿದರು. ಕೆಲವು ಸಹವರ್ತಿಗಳ ಜೊತೆ ತೆರಳಿದ ಶಾಸಕರು, ಅಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು.

ರಾತ್ರಿ ವೇಳೆ ನಡೆಯುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವುದಿಲ್ಲ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಅವರು ಪರಿಶೀಲನೆ ನಡೆಸಿ, ಕಳಪೆ ಕಾಮಗಾರಿ ನಡೆಸದಂತೆ ಸಂದೇಶ ರವಾನಿಸಿದರು. ಶಾಸಕರು ಯಾವುದೇ ಸಮಯದಲ್ಲಿ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಬಹುದು ಎನ್ನುವ ಭಯ ಗುತ್ತಿಗೆದಾರರಲ್ಲಿ ಇರುವಂತೆ ಮಾಡಿದರು.

ಈ ಸುದ್ದಿಯನ್ನೂ ಓದಿ – 

ಮಧ್ಯ ರಾತ್ರಿ ಶಾಸಕ ಅಭಯ್ ಪಾಟೀಲ ಏನು ಮಾಡುತ್ತಿದ್ದಾರೆ ನೋಡಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button