*ಅಕ್ರಮ ವಿದ್ಯುತ್ ಸಂಪರ್ಕ; ಮಾಜಿ ಸಿಎಂ ಕುಮಾರಸ್ವಾಮಿಗೆ ಬೆಸ್ಕಾಂ ವಿಧಿಸಿದ ದಂಡವೆಷ್ಟು?*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರಿಗೆ ಬೆಸ್ಕಾಂ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬೆಂಗಳೂರಿನ ಜೆ.ಪಿ.ನಗರದ ತಮ್ಮ ನಿವಾಸದ ದೀಪಾಲಂಕಾರಕ್ಕಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮನೆಯ ಪಕ್ಕದಲ್ಲಿರುವ ಕರೆಂಟ್ ಕಂಬದಿಂದ ನೇರವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಅಲ್ಲದೇ ಬೆಸ್ಕಾಂ ಅಧಿಕಾರಿಗಳು ಮಾಜಿ ಸಿಎಂ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದು ಖಚಿತವಾಗಿತ್ತು.
ಮಾಜಿ ಸಿಎಂ ಕುಮಾರಸ್ವಾಮಿಗೆ ಆಡಳಿತ ಪಕ್ಷ ಕಾಂಗ್ರೆಸ್ ವಿದ್ಯುತ್ ಕಳ್ಳ ಎಂದು ಕಿಡಿಕಾರಿತ್ತು. ಅಲ್ಲದೇ ಹೆಚ್.ಡಿ.ಕೆ ವಿರುದ್ಧ ವಿದ್ಯುತ್ ಕಳ್ಳತನ ಆರೋಪದಲ್ಲಿ ಎಫ್ ಐ ಆರ್ ಕೂಡ ದಾಖಲಾಗಿತ್ತು.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಬೆಸ್ಕಾಂ ಅಧಿಕಾರಿಗಳು ಮಾಜಿ ಸಿಎಂ ಅಕ್ರಮವಾಗಿ ಉಪಗೋಸಿದ್ದ ವಿದ್ಯುತ್ ಗೆ ದಂಡ ವಿಧಿಸಿದ್ದಾರೆ. ಹತ್ತು ನಿಮಿಷಕ್ಕೆ ಬಳಕೆಯಾದ ವಿದ್ಯುತ್ ಎಷ್ಟು ಎಂಬ ಆಧಾರದ ಮೇಲೆ ಎರಡು ದಿನನ ಬಳಿಸಿದ ಅಕ್ರಮ ವಿದ್ಯುತ್ ಗೆ 68,526 ರೂಪಾಯಿ ದಂಡ ವಿಧಿಸಿದ್ದಾರೆ.
ಈಗಾಗಲೇ ದಂಡದ ಮೊತ್ತ ಪಾವತಿ ಮಾಡಿದ್ದಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ